-->

ತಲೆಬುರುಡೆ ಬಂದ ಬೆನ್ನಲ್ಲೇ ಪತ್ತೆಯಾಯಿತು ಅಸ್ಥಿಪಂಜರ: 2 ತಿಂಗಳಿನಿಂದ ಪತಿ ಕಾಣೆಯಾಗಿದ್ದಾನೆಂದು ಮಹಿಳೆಯಿಂದ ಈಗ ದೂರು

ತಲೆಬುರುಡೆ ಬಂದ ಬೆನ್ನಲ್ಲೇ ಪತ್ತೆಯಾಯಿತು ಅಸ್ಥಿಪಂಜರ: 2 ತಿಂಗಳಿನಿಂದ ಪತಿ ಕಾಣೆಯಾಗಿದ್ದಾನೆಂದು ಮಹಿಳೆಯಿಂದ ಈಗ ದೂರು

ಕಡಬ: ಇಲ್ಲಿನ ಅನ್ನಡ್ಕ ಎಂಬಲ್ಲಿ ಎರಡು ದಿನಗಳ ಹಿಂದೆ ತಲೆಬುರುಡೆ ಪತ್ತೆಯಾದ ಬೆನ್ನಲ್ಲೇ ಇದೀಗ ಅಲ್ಲಿ ಮಾನವ ಅಸ್ತಿಪಂಜರವೊಂದು ಪತ್ತೆಯಾಗಿದೆ.
ಈ ವಿದ್ಯಮಾನಗಳ ಬಳಿಕ ಅಲ್ಲೇ ಸಮೀಪದ ಮಹಿಳೆಯೋರ್ವಳು ತನ್ನ ಗಂಡ ನಾಪತ್ತೆಯಾಗಿದ್ದಾನೆಂದು ದೂರು ದಾಖಲಿಸಿದ್ದಾಳೆ.

ಇದೀಗ ಈ ಎರಡೂ ಘಟನೆಗಳ ಬಗ್ಗೆ ಪೊಲೀಸರು ಕೂಲಂಕಷ ತನಿಖೆ ಪ್ರಾರಂಭಿಸಿದ್ದಾರೆ.

ಸುಮಾರು 40 ವರ್ಷ ಪ್ರಾಯದ ಗೀತಾ ಎಂಬ ಮಹಿಳೆ 2 ತಿಂಗಳ ಹಿಂದೆ ತನ್ನ ಗಂಡ ಸತೀಶ್ ನಾಪತ್ತೆಯಾಗಿದ್ದಾನೆಂದು ದೂರನ್ನು ದಾಖಲಿಸಿದ್ದಾರೆ‌.

ಸತೀಷ್ ಗೆ ಕುಡಿತದ ಚಟವಿದ್ದು, ಕೆಲವೊಮ್ಮೆ ಮನೆಯಲ್ಲಿ ಗಲಾಟೆ ಮಾಡಿ ವಾರಗಟ್ಟಲೆ ಮನೆಯಿಂದ ಹೊರಗೆ ಇರುತ್ತಿದ್ದ.

ಆದರೆ ಆಗಸ್ಟ್ 2 ರಂದು ಮನೆಬಿಟ್ಟು ಹೋಗಿರುವ ಗಂಡ ಮರಳಿ ಮನೆಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದೀಗ ಪತ್ತೆಯಾಗಿರುವ ತಲೆಬುರುಡೆ, ಅಸ್ಥಿಪಂಜರ ತನ್ನ ಗಂಡನದ್ದಾಗಿರಬಹುದೇ ಎಂದು ತನಿಖೆ ನಡೆಸಲು ದೂರಿನಲ್ಲಿ ತಿಳಿಸಿದ್ದಾಳೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99