ಮೊನ್ನೆ ಫೇಸ್‌ಬುಕ್, ವಾಟ್ಸಪ್; ಇಂದು gmail ಸ್ಥಗಿತ
Tuesday, October 12, 2021
ನವದೆಹಲಿ: ಭಾರತ ಸಹಿತ ಹಲವು ರಾಷ್ಟ್ರಗಳಲ್ಲಿ ಇಂದು gmail ಸೇವೆಯಲ್ಲಿ ವ್ಯತ್ಯಯ ಕಂಡುಬಂದಿದೆ.
ಕೆಲದಿನಗಳ ಹಿಂದೆ ಫೇಸ್‌ಬುಕ್, ವಾಟ್ಸಪ್ ಮತ್ತು ಇನ್‌ಸ್ಟಾಗ್ರಾಂ ಗಳು ಸುಮಾರು ಆರು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಇದೀಗ gmailಗೆ ಕೂಡಾ ಅದೇ ಸ್ಥಿತಿ ಉಂಟಾಗಿತ್ತು.
ಇಂದು ಬಹುತೇಕ ಜಿ ಮೇಲ್ ಬಳಕೆದಾರರು ಮೇಲ್ ಕಳುಹಿಸಲು ಹಾಗೂ ಸ್ವೀಕರಿಸುವಲ್ಲಿ ಅಡಚಣೆಯನ್ನು ಕಂಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ದೂರಿಕೊಂಡಿದ್ದಾರೆ.
ಆದರೆ ಈ ಸಂಬಂಧ ಜಿಮೇಲ್ನಿಂದ ಈವರೆಗೆ ಯಾವುದೇ ಪ್ರತಿಕ್ರಿಯೆಗಳು ಲಭ್ಯವಾಗಿಲ್ಲ.