
ಜಾರ್ಖಂಡ್: ಪ್ರಧಾನಿ ಮೋದಿ ಉದ್ಘಾಟಿಸಬೇಕಿದ್ದ ಆಕ್ಸಿಜನ್ ಪ್ಲ್ಯಾಂಟ್ ಉದ್ಘಾಟಿಸಿದ ಮುಖ್ಯಮಂತ್ರಿ ಹೇಮಂತ್ ಸೂರೇನ್
ರಾಂಚಿ: ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಉದ್ಘಾಟಿಸಬೇಕಿದ್ದ ಆಕ್ಸಿಜನ್ ಪ್ಲ್ಯಾಂಟ್ ಅನ್ನು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೂರೇನ್ ಒಂದು ದಿನ ಮುಂಚಿತವಾಗಿ ಉದ್ಘಾಟಿಸಿದ ಘಟನೆ ಜಾರ್ಖಂಡ್‌ನ ರಾಂಚಿಯ ಸದರ್ ಆಸ್ಪತ್ರೆಯಲ್ಲಿ ನಡೆದಿದೆ.
ಜಾರ್ಖಂಡ್ ಮುಖ್ಯಮಂತ್ರಿಯ ಈ ನಡೆ ಬಗ್ಗೆ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಪ್ರಧಾನಿಗೆ ಮಾಡಿದ ಅವಮಾನ ಎಂದಿದ್ದಾರೆ.
ಪಿಎಂ ಕೇರ್ ಫಂಡ್ ಮೂಲಕ ನಿರ್ಮಿಸಲಾಗಿರುವ ಆಕ್ಸಿಜನ್ ಫ್ಲ್ಯಾಂಟ್‌ಗಳನ್ನು ಗುರುವಾರ ದೇಶದಾದ್ಯಂತ ಏಕ ಕಾಲದಿಂದ ಉದ್ಘಾಟಿಸಲು ಸಿದ್ಧತೆ ನಡೆದಿತ್ತು.
ಆದರೆ ಜಾರ್ಖಂಡ್‌ನಾದ್ಯಂತ ಹಲವು ಆರೋಗ್ಯ ಸೇವೆಗಳನ್ನು ಉದ್ಘಾಟಿಸುತ್ತಾ ಬಂದಿದ್ದ ಹೇಮಂತ್ ಸೂರೇನ್ ರಿಬ್ಬನ್ ಕತ್ತರಿಸುವ ಮೂಲಕ ಪ್ರಧಾನಿ ಉದ್ಘಾಟಿಸಬೇಕಿದ್ದ ಆಕ್ಸಿಜನ್ ಪ್ಲ್ಯಾಂಟ್ ಅನ್ನು ಮುಂಚಿತವಾಗಿಯೇ ಉದ್ಘಾಟಿಸಿದ್ದರು. ಇದು ಕೇಂದ್ರ ಮತ್ತು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ
ಇನ್ನು ಹೇಮಂತ್ ಸೂರೇನ್ ಅವರ ಈ ಘಟನೆಯನ್ನು ಅವರ ಪಕ್ಷ ಜೆಎಂಎಂ ಸಮರ್ಥಿಸಿದ್ದು, ಅಗತ್ಯ ಸೇವೆಗಳನ್ನು ಕಾಯುವ ಅಗತ್ಯವಿಲ್ಲ. ಅದನ್ನು ತುರ್ತಾಗಿ ಲೋಕಾರ್ಪಣೆ ಮಾಡಬೇಕಿದೆ ಎಂದಿದೆ.