-->

ದಕ್ಷಿಣ ಕನ್ನಡ: ಇಲ್ಲಿ ದೇವಸ್ಥಾನಗಳಿಗೆ ವಟ್ರಾಸಿ ಡ್ರೆಸ್ ಹಾಕಿಕೊಂಡು ಹೊಗುವಂತಿಲ್ಲ ಮಾರ್ರೆ! - ದೇವಸ್ಥಾನದ ಮುಂಭಾಗ ಅಳವಡಿಸಿದ ಬ್ಯಾನರ್‌ನಲ್ಲಿ ಏನಿದೆ ಗೊತ್ತಾ?

ದಕ್ಷಿಣ ಕನ್ನಡ: ಇಲ್ಲಿ ದೇವಸ್ಥಾನಗಳಿಗೆ ವಟ್ರಾಸಿ ಡ್ರೆಸ್ ಹಾಕಿಕೊಂಡು ಹೊಗುವಂತಿಲ್ಲ ಮಾರ್ರೆ! - ದೇವಸ್ಥಾನದ ಮುಂಭಾಗ ಅಳವಡಿಸಿದ ಬ್ಯಾನರ್‌ನಲ್ಲಿ ಏನಿದೆ ಗೊತ್ತಾ?

ಮಂಗಳೂರು: ಇನ್ನು ಜಿಲ್ಲೆಯಲ್ಲಿ ಬೇಕಾಬಿಟ್ಟಿ ವಸ್ತ್ರಗಳನ್ನು ಧರಿಸಿಕೊಂಡು ದೇವಸ್ಥಾನ ಪ್ರವೇಶಿಸುವಂತಿಲ್ಲ. ಶೀಘ್ರದಲ್ಲೇ ಈ ನಿಟ್ಟಿನಲ್ಲಿ ವಸ್ತ್ರ ಸಂಹಿತೆ ಬರಲಿದ್ದು, ಬಳಿಕ ಈ ಕುರಿತು ಸ್ಪಷ್ಟ ನಿರ್ಧಾರವಾಗಲಿದೆ.

ಈಗಾಗಲೇ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ರಾಜರಾಜೇಶ್ವರಿ ದೇವಸ್ಥಾನ ಪೊಳಲಿ ಮೊದಲದ ಜಿಲ್ಲೆಯ ಪ್ರಮುಖ ದೇವಸ್ಥಾನಗಳು ಈಗಾಗಲೇ ಭಕ್ತರ ಬಳಿ ಹಿಂದೂ ಸಂಪ್ರದಾಯದ ಧಿರಿಸಿನೊಂದಿಗೆ ದೇವಸ್ಥಾನ ಪ್ರವೇಶಿಸಲು ವಿನಂತಿ ಮಾಡಿದೆ. ಈ ನಿಟ್ಟಿನಲ್ಲಿ ದೇವಸ್ಥಾನದ ಮುಂಭಾಗ ಬ್ಯಾನರ್ ಅನ್ನು ಕೂಡಾ ಅಳವಡಿಸಿದೆ.

ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.

ವಸ್ತ್ರ ಸಂಹಿತೆ ಅಂದರೆ ಅದು ಕೇವಲ ಮಹಿಳೆರಿಗಷ್ಟೇ ಅಲ್ಲ. ಪುರುಷರಿಗೂ ಅನ್ವಯಿಸುತ್ತದೆ. ಆದರೆ‌ ಯಾವ ವಸ್ತ್ರಗಳನ್ನು ಧರಿಸಬೇಕು, ಯಾವುದನ್ನು ಧರಿಸಬಾರದು ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಈ ಕುರಿತು ಆಡಳಿತ ಮಂಡಳಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಹರಿನಾರಾಯಣ ಆಸ್ರಣ್ಣ ಹೇಳಿದ್ದಾರೆ.



Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99