
Indonesia: ಗುಹೆಯಲ್ಲಿ ಪತ್ತೆಯಾಯಿತು ಸಾವಿರಾರು ವರ್ಷಗಳ ಹಿಂದಿನ ಯುವತಿಯ ಅಸ್ಥಿಪಂಜರ; ಸಂಶೋಧಕರು ಏನ್ ಹೇಳ್ತಾರೆ ನೋಡಿ
ಜಕಾರ್ತಾ: ಇಂಡೋನೇಶಿಯಾದ ಗುಹೆಯೊಂದರಲ್ಲಿ ಸುಮಾರು 7 ಸಾವಿರ ವರ್ಷಗಳ ಹಿಂದಿನ ಮೃತದೇಹವೊಂದು ಸಿಕ್ಕಿದ್ದು, ಸದ್ಯ ಈ ಕಳೇಬರವನ್ನು ವಿಶ್ವ ವಿದ್ಯಾನಿಲಯದಲ್ಲಿ ಸಂಶೋಧನೆಗೆಂದು ಇಡಲಾಗಿದೆ.
ಈ ಮೃತದೇಹವು ಗುಹೆಯಲ್ಲಿ ಸಮಾಧಿ ಮಾಡಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಮೂಲಕ ಏಷಿಯಾದಲ್ಲಿ ಮಾನವ ವಲಸೆ ಬಗೆಗಿನ ಆರಂಭಿಕ ಹಂತದ ಮಾಹಿತಿಗಳು ಸಂಶೋಧಕರಿಗೆ ದೊರಕಿದೆ.
ಯುವತಿಯ ದೇಹದಲ್ಲಿ ದ್ವಿ ವಿಭಾಗದ ಕುರುಹುಗಳು ಪತ್ತೆಯಾಗಿದ್ದು, ನವಶಿಲಾಯುಗದ ಮೊದಲಿನ ಹಾಗೂ ಆಸ್ಟ್ರೋನೇಶಿಯನ್ ಮಾದರಿಗಳು ಸಂಶೋಧಕರಿಗೆ ಪತ್ತೆಯಾಗಿದೆ.
ಯುವತಿಯ ಮೃತದೇಹವನ್ನು ಅತ್ಯುನ್ನತ ರೀತಿಯಲ್ಲಿ ಸಂರಕ್ಷಿಸಲಾಗಿದ್ದು, ಇದು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಿರಬಹುದೆಂದು ಸಂಶೋಧಕರು ಹೇಳಿದ್ದಾರೆ.