ಚೀನಾದ ಕಾರುಗಳನ್ನು ನಮ್ಮಲ್ಲಿ ಮಾರಬೇಡಿ: ಟೆಸ್ಲಾಗೆ ನಿತಿನ್ ಗಡ್ಕರಿ ವಾರ್ನಿಂಗ್
Friday, October 8, 2021
ನವದೆಹಲಿ: ಮೇಡ್ ಚೀನಾ ಕಾರುಗಳನ್ನು ಭಾರತದಲ್ಲಿ ಮಾರಬೇಡಿ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಟೆಸ್ಲಾ ಕಂಪೆನಿಗೆ ಸೂಚಿಸಿದ್ದಾರೆ.
ಕಾರುಗಳನ್ನು ಉತ್ಪಾದನೆ ಮಾಡಲು ಭಾರತದಲ್ಲಿ ವಿಫುಲ ಅವಕಾಶವಿದೆ. ನೀವು ಬೇಕಿದ್ದರೆ ಇಲ್ಲೇ ಉತ್ಪಾದನೆ ಮಾಡಿ ಇಲ್ಲಿಂದಲೇ ರಫ್ತು ಕೂಡಾ ಮಾಡಬಹುದು. ಇದಕ್ಕೆ ಬೇಕಾಗಿರುವ ಬೆಂಬಲ ನಾವು ಕೊಡ್ತೇವೆ ಎಂದು ನಿತಿನ್ ಗಡ್ಕರಿ ಟೆಸ್ಲಾ ಕಂಪೆನಿಗೆ ಸೂಚಿಸಿದ್ದಾರೆ.
ಈ ಕುರಿತಾಗಿ ಇಂಡಿಯಾ ಟುಡೇ ಕಾನ್‌ಕ್ಲೇವ್ 2021ರಲ್ಲಿ ಅವರು ಮಾತನಾಡಿರುವ ವೀಡಿಯೋ ತುಣುಕನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.
ಜಗತ್ತಿನಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚತೊಡಗಿದೆ. ಇದಕ್ಕೆ ತಕ್ಕಂತೆ ಭಾರತದಲ್ಲಿ ಪೂರಕ ವಾತಾವರಣ ಸೃಷ್ಟಿಸಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ.