
'ಅವರು ಹಿರಿಯ ವ್ಯಕ್ತಿಗಳು; ಮೃಗಾಲಯದೊಳಗಿನ ಪ್ರಾಣಿ ಅಲ್ಲ': ಮನಮೋಹನ್ ಸಿಂಗ್ ಬಗ್ಗೆ ಖುದ್ದು ಮಗಳೇ ಈ ರೀತಿ ಹೇಳಿದ್ದೇಕೆ?
ನವದೆಹಲಿ: ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಯೋಗ ಕ್ಷೇಮ ವಿಚಾರಿಸಲು ಬಂದ ಕೇಂದ್ರ ಆರೋಗ್ಯ ಸಚಿವ ಮಾನ್ಸುಕ್ ಮಾಂಡವೀಯ ತನ್ನ ಜೊತೆಗೆ ಫೋಟೋ ಗ್ರಾಫರನ್ನು ಕರೆದುಕೊಂಡು ಹೋಗಿರುವುದು ಸಿಂಗ್ ಕುಟುಂಬದ ಅಸಮಾಧಾನಕ್ಕೆ ಕಾರಣವಾಗಿದೆ.
ಮಾನ್ಸುಕ್ ಮಾಂಡವೀಯ ಫೋಟೋ ಗ್ರಾಫರ್ ಅನ್ನು ಕರೆದುಕೊಂಡು ಹೋಗಿರುವುದಲ್ಲದೇ ಚಿಕಿತ್ಸೆಯಲ್ಲಿರುವ ಸಿಂಗ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.
ಫೋಟೋ ತೆಗೆಸಿಕೊಳ್ಳುವುದು ಸಿಂಗ್ ಕುಟುಂಬದ ಸದಸ್ಯರಿಗೆ ಇಷ್ಟವಿರಲಿಲ್ಲ. ಹೀಗಾಗಿ ಸಿಂಗ್ ಪತ್ನಿ ಫೋಟೋ ಗ್ರಾಫರ್‌ನ್ನು ಹೊರ ಹೋಗುವಂತೆ ವಿನಂತಿಸಿದ್ದರು. ಆದರೆ ಫೋಟೋ ಗ್ರಾಫರ್ ಇದನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಮನಮೋಹನ್ ಸಿಂಗ್ ಪುತ್ರಿ ಆರೋಪಿಸಿದ್ದಾಳೆ.
ನನ್ನ ತಂದೆ ಡೆಂಗ್ ಇದ್ದಿರುವುದರಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗಿತ್ತು. ನನ್ನ ಪೋಷಕರು ಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಜೊತೆ ಈ ರೀತಿಯಾಗಿ ಫೋಟೋ ತೆಗೆಸಿಕೊಳ್ಳಲು "ಅವರು ಮೃಗಾಲಯದ ಪ್ರಾಣಿಗಳಲ್ಲ. ಅವರು ಹಿರಿಯ ವ್ಯಕ್ತಿಗಳು" ಎಂದು ಸಿಂಗ್ ಮಗಳು ದಾಮನ್ ಸಿಂಗ್ ದ ಪ್ರಿಂಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಆರೋಗ್ಯ ಸಚಿವರು ಭೇಟಿ ನೀಡಿ ಆರೋಗ್ಯ ವಿಚಾರಿಸಿರುವುದು ಉತ್ತಮ ವಿಚಾರ. ಆದರೆ ನನ್ನ ಪೋಷಕರು ಫೋಟೋ ತೆಗೆಸಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಮಗಳು ಹೇಳಿದ್ದಾಳೆ.