
OTP ಕೊಟ್ಟು ಕೆಟ್ಟ ನಿವೃತ್ತ ಡಿಜಿಪಿ: ಮಾಜಿ ಪೊಲೀಸ್ ಮಹಾ ನಿರ್ದೇಶಕ ಕಳೆದುಕೊಂಡ ಹಣ ಎಷ್ಟು ಗೊತ್ತಾ?
Saturday, October 16, 2021
ಬೆಂಗಳೂರು: ಆನ್‌ಲೈನ್ ವಂಚಕರ ಕರೆಗೆ ಓಗೊಟ್ಟು OTP (one time password) ಹಂಚಿಕೊಂಡ ನಿವೃತ್ತ ಪೊಲೀಸ್ ಮಹಾ ನಿರ್ದೇಶಕರು ಇದೀಗ ಹಣ ಕಳೆದುಕೊಂಡಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಸ್ಟಮರ್ ಕೇರ್ ಪ್ರತಿನಿಧಿ ಎಂದು ಅಕ್ಟೋಬರ್ 11ಕ್ಕೆ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿಗೆ ಕರೆ ಬಂದಿತ್ತು.
ನಿಮ್ಮ ಪ್ಯಾನ್ ನಂಬರ್ ನವೀಕರಣ ಮಾಡಬೇಕಿದ್ದು, ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಸ್ಥಗಿತಗೊಳ್ಳುತ್ತೆ ಎಂದು ಹೇಳಿರುವ ವಂಚಕರು ಬಳಿಕ ಮೊಬೈಲ್ ಗೆ ಬಂದಿರುವ ಒಟಿಪಿ ಸಂಖ್ಯೆಯನ್ನು ನೀಡುವಂತೆ ಕೇಳಿಕೊಂಡಿದ್ದಾರೆ.
ಇದನ್ನು ನಂಬಿ ಒಟಿಪಿ ಸಂಖ್ಯೆ ಹಂಚಿಕೊಂಡಿರುವ ಬಿದರಿ ತಮ್ಮ ಖಾತೆಯಿಂದ 89 ಸಾವಿರ ರೂ. ಕಳೆದುಕೊಂಡಿದ್ದಾರೆ.
ಇದೀಗ ವಂಚಕರ ವಿರುದ್ಧ ಬಿದರಿ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.