
live in relationship (ಸಂಗಾತಿಯೊಂದಿಗೆ ಸಹಜೀವನ) ಬಗ್ಗೆ ಅಲಹಬಾದ್ ಹೈಕೋರ್ಟ್ ನೀಡಿದ ತೀರ್ಪು ಏನು ಗೊತ್ತಾ?
ಪ್ರಯಾಗ್‌ರಾಜ್/ಉ.ಪ್ರ: ಲಿವ್ ಇನ್ ರಿಲೇಶನ್‌ಶಿಪ್ ಅಥವಾ ಸಹಜೀವನ ಸಂಬಂಧಗಳು ಜೀವನದ ಭಾಗವಾಗಿದ್ದು, ಅವುಗಳನ್ನು ಸಾಮಾಜಿಕ, ನೈತಿಕತೆಯ ಪರಿಕಲ್ಪನೆಗಳಿಗಿಂತ ಪ್ರಮುಖವಾಗಿ ವೈಯಕ್ತಿಕ ದೃಷ್ಟಿಕೋನದಿಂದ ನೋಡಬೇಕಿದೆ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಲಿವ್-ಇನ್ ರಿಲೇಶನ್‌ಶಿಪ್ ಸಂಬಂಧ ಹೊಂದಿದ್ದ ಇಬ್ಬರು ಭಿನ್ನರ್ಧರ್ಮೀಯರು ಸಲ್ಲಿಸಿದ್ದ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಪ್ರೀತಿಂಕರ್ ದಿವಾಕರ್ ಮತ್ತು ಅಶುತೋಷ್ ಶ್ರೀವಾಸ್ತವ ಅವರ ಪೀಠ ಈ ಅಭಿಪ್ರಾಯಪಟ್ಟಿದೆ.
ಸಹಜೀವನ ಸಂಬಂಧದಲ್ಲಿದ್ದ ಮಹಿಳೆಯರ ಕುಟುಂಬದವರು ಈ ವಿಚಾರವಾಗಿ ನಡೆಸುತ್ತಿದ್ದ ಹಸ್ತಕ್ಷೇಪದ ಬಗ್ಗೆ ಆರೋಪಿಸಿ ಇಬ್ಬರಿಂದ ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿತ್ತು.
ಶಯಾರಾ ಖಾತುನ್ ಮತ್ತು ಜೀನತ್ ಪರ್ವೀನ್ ಎರಡು ಅರ್ಜಿಗಳನ್ನು ಸಲ್ಲಿಸಿದವರು. ಈ ವಿಚಾರವಾಗಿ ಇವರು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ನೆರವು ಸಿಗಲಿಲ್ಲ. ಹಾಗಾಗಿ ತಮ್ಮ ಜೀವನ ಅತಂತ್ರವಾಗಿದೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.
ತನ್ನ ಸಂಗಾತಿಯ ಜೀವಿಸುವ ಹಕ್ಕನ್ನು
ಸಂವಿಧಾನದ ಪರಿಚ್ಛೇದ 21 ರ ಅಡಿಯಲ್ಲಿ ಪ್ರತಿಪಾದಿಸಿದಂತೆ ರಕ್ಷಿಸಲು ಸಂಗಾತಿ ಹೊಣೆಗಾರರಾಗಿದ್ದಾರೆ. ಹಾಗಾಗಿ ಲಿವ್ ಇನ್ ರಿಲೇಷನ್ ಶಿಪ್ ಜೀವನದ ಭಾಗವಾಗಿ ಅಂಗೀಕರಿಸಲ್ಪಟ್ಟಿದೆ. ಈ ರೀತಿಯ ಸಂಬಂಧಗಳು, ಸಾಮಾಜಿಕ ನೈತಿಕತೆಯ ಕಲ್ಪನೆಗಳಿಗಿಂತ ಹೆಚ್ಚಾಗಿ, ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸುವ ಬದುಕುವ ಹಕ್ಕಿನಿಂದ ಉಂಟಾಗುವ ವೈಯಕ್ತಿಕ ಸ್ವಾಯತ್ತತೆ ದೃಷ್ಠಿಯಿಂದ ನೋಡಬೇಕಾಗಿದೆ ಎಂದಿದೆ. ಅಲ್ಲದೇ ಪ್ರಕರಣದಲ್ಲಿ ಅರ್ಜಿದಾರರ ಹಕ್ಕುಗಳನ್ನು ರಕ್ಷಿಸಲು ಪೊಲೀಸ್ ಅಧಿಕಾರಿಗಳು ಬದ್ಧರಾಗಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.