
ಸಿಬ್ಬಂದಿ ಎಡವಟ್ಟು: ಪಿಲಿಕುಳ ನಿಸರ್ಗಧಾಮದಲ್ಲಿ ಗೂಡಿನಿಂದ ಹೊರಬಂದು ಆತಂಕ ಸೃಷ್ಟಿಸಿದ ಸಿಂಹ - ಕೊನೆಗೂ ಸಿಂಹ ಎಲ್ಲಿತ್ತು ಗೊತ್ತಾ?
Sunday, October 3, 2021
ಮಂಗಳೂರು: ಸಿಂಹದ ಬೋನು ಶುಚಿಗೊಳಿಸುವ ವೇಳೆ ಎನ್‌ಕ್ಲೋಶರ್‌ನ (ಸಿಂಹ ವಿಹರಿಸುವ ವಿಶಾಲವಾದ ಆವರಣ) ಗೇಟು ಹಾಕಲು ಮರೆತ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಕೆಲ ಕಾಲ ಬೆಸ್ತು ಬಿದ್ದ ಘಟನೆ ಪಿಲಿಕುಳ ನಿಸರ್ಗಧಾಮದಲ್ಲಿ ನಡೆದಿದೆ.
ವಿಚಿತ್ರ ಅಂದರೆ ಜುಲೈನಲ್ಲಿ ನಡೆದ ಈ ಘಟನೆ ಇತ್ತೀಚೆಗಷ್ಟೇ ಹೊರಬಂದಿದೆ.
ಪಿಲಿಕುಳ ನಿಸರ್ಗಧಾಮದ ಸಿಂಹದ ಬೋನನ್ನು ಶುಚಿಗೊಳಿಸುವ ವೇಳೆ ಸಿಬ್ಬಂದಿ ಎನ್‌ಕ್ಲೋಶರ್‌ನ ಗೇಟ್ ಹಾಕಲು ಮರೆತಿದ್ದ. ಬೋನು ಶಿಚಿಗೊಳಿಸಿ ಹೊರಬರುವಾಗ ಸಿಂಗ ಅಲ್ಲಿರಲಿಲ್ಲ. ಆವಾಗಲೇ ಸಿಬ್ಬಂದಿಗೆ ತಾನು ಗೇಟ್ ಹಾಕದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಹಿರಿಯ ಅಧಿಕಾರಿಗಳು ಸಿಂಹ ಪತ್ತೆಗೆ ತಂಡ ರಚಿಸಿದ್ದರು. ಸುರಕ್ಷತೆಯ ದೃಷ್ಟಿಯಿಂದ ಇತರ ಸಿಬ್ಬಂದಿಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು.
ಸುಮಾರು ಮೂರು ಗಂಟೆಗಳ ಹುಡುಕಾಟದ ಬಳಿಕ ಸಿಂಹ ಬೋನಿನ ಹಿಂಭಾಗದ ಪ್ಯಾಡಕ್‌ನಲ್ಲಿ ಪತ್ತೆಯಾಗಿದೆ.
ಸಿಂಹವನ್ನು ಮತ್ತೆ ಬೋನಿಗೆ ಸೇರಿಸಿದ ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದಾರೆ.