-->
ads hereindex.jpg
ಸಮುದ್ರ ಮಧ್ಯದಲ್ಲಿ ಡ್ರಗ್ಸ್ ಪಾರ್ಟಿ - ಶಾರೂಖ್ ಖಾನ್ ಮಗನ ಸಹಿತ ಎಂಟು ಮಂದಿ NCB ವಶಕ್ಕೆ: ಪಾರ್ಟಿ ರೈಡ್ ಹಿಂದೆ ಇದೆ ಇಂಟ್ರಸ್ಟಿಂಗ್ ಸ್ಟೋರಿ

ಸಮುದ್ರ ಮಧ್ಯದಲ್ಲಿ ಡ್ರಗ್ಸ್ ಪಾರ್ಟಿ - ಶಾರೂಖ್ ಖಾನ್ ಮಗನ ಸಹಿತ ಎಂಟು ಮಂದಿ NCB ವಶಕ್ಕೆ: ಪಾರ್ಟಿ ರೈಡ್ ಹಿಂದೆ ಇದೆ ಇಂಟ್ರಸ್ಟಿಂಗ್ ಸ್ಟೋರಿ

ಮುಂಬೈ: ಸಮುದ್ರ ಮಧ್ಯದಲ್ಲಿ ಐಶಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಗೆ ದಾಳಿ ನಡೆಸಿರುವ NCB (Narcotic Control Bureau) ಅಧಿಕಾರಿಗಳು ಹತ್ತಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದು, ತೀವ್ರ  ವಿಚಾರಣೆಗಾಗಿ ಅವರ ಪೈಕಿ 8 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.


8 ಜನರ ಪೈಕಿ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಇರುವುದಾಗಿ ತಿಳಿದು ಬಂದಿದೆ. ಅಲ್ಲದೇ ಮೂವರು ಯುವತಿಯರೂ ಇದ್ದಾರೆ.

ಶನಿವಾರ ರಾತ್ರಿ ಈ ದಾಳಿ ನಡೆದಿದೆ. ಮುಂಬೈ ಬಂದರಿನಿಂದ ಗೋವಾಕ್ಕೆ ತೆರಳಿ ಮತ್ತೆ ಮುಂಬೈಗೆ ಹಿಂದಿರುಗುವಂತೆ ಐಶಾರಾಮಿ ಹಡಗೊಂದನ್ನು ಎರಡು ದಿನಕ್ಕೆ ಬುಕ್ ಮಾಡಲಾಗಿತ್ತು. ಸಂಗೀತ ಕಾರ್ಯಕ್ರಮದ ಹೆಸರಿನಲ್ಲಿ ಹಡಗನ್ನು ಬುಕ್ ಮಾಡಲಾಗಿದ್ದು, ಪ್ರಮುಖ ಮನರಂಜನಾ ಚಾನೆಲ್ ಕೂಡಾ ಇದಕ್ಕೆ ಸಾಥ್ ನೀಡಿದೆ ಎನ್ನಲಾಗಿದೆ.

ಆದರೆ ಮನರಂಜನೆ ಹೆಸರಿನಲ್ಲಿ ಹಡಗಿನೊಳಗೆ ಡ್ರಗ್ ಪಾರ್ಟಿ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ದಾಳಿ ನಡೆಸಿದ್ದು ಹೇಗೆ:
ಐಶಾರಾಮಿ ಹಡಗು ಬುಕ್ ಮಾಡಿದ್ದು, ಇದರಲ್ಲಿ ಡ್ರಗ್ಸ್ ಪಾರ್ಟಿ ನಡೆಯಲಿದೆ ಎಂಬ ಮಾಹಿತಿ NCB ಅಧಿಕಾರಿಗಳಿಗೆ ದೊರೆತಿತ್ತು. ಈ ನಿಟ್ಟಿನಲ್ಲಿ ಅಧಿಕಾರಿಗಳು ಅದೇ ಹಡಗಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್ ಮಾಡಿ ಬಂದಿದ್ದರು.
ಹಡಗು ಸಮುದ್ರ ಮಧ್ಯೆ ತಲುಪುತ್ತಿದ್ದಂತೆ ಪಾರ್ಟಿ ಆರಂಭಗೊಂಡಿದ್ದು, ಅಧಿಕಾರಿಗಳು ಹಲವರನ್ನು ವಶಕ್ಕೆ ಪಡೆದು ಹಡಗನ್ನು ಮುಂಬೈಗೆ ತಂದಿದ್ದಾರೆ.

ಹಡಗಿನಲ್ಲಿ 100ಕ್ಕೂ ಅಧಿಕ ಮಂದಿ ಇದ್ದರು.
ಈ ಪೈಕಿ ಕಾರ್ಯಕ್ರಮದ ಆಯೋಜಕರು ಮತ್ತು ಪ್ರಮುಖ ವ್ಯಕ್ತಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. 

Ads on article

Advertise in articles 1

advertising articles 2