
ಅಬ್ಬಬ್ಬಾ ಎಂತಹ ಮಾತು!: ಕುಮಾರಸ್ವಾಮಿಯನ್ನು ಸಾಕಿದ್ದೇ ಇವರಂತೆ
ಕಲಬುರಗಿ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಶಾಸಕ ಝಮೀರ್ ಅಹ್ಮದ್ ಖಾನ್ ವಾಕ್ಸಮರ ತಾರಕಕ್ಕೇರಿದ್ದು, ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಝಮೀರ್ ಅಹ್ಮದ್ ಖಾನ್ 'ಕುಮಾರಸ್ವಾಮಿಯನ್ನು ಸಾಕಿ ಬೆಳೆಸಿದ್ದೇ ನಾನು' ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ನನಗೆ ನನ್ನ ತಾತನ ಕಾಲದಿಂದಲೇ ಬಸ್ ಇದೆ. ಕುಮಾರಸ್ವಾಮಿ ಹಾಗೆ ಸ್ಕೂಟರ್‌ನಲ್ಲಿ ಹೋಗಿ ಕಸ ಗುಡಿಸ್ತಿರಲಿಲ್ಲ ಎಂದಿದ್ದಾರೆ.
ಅಲ್ಲದೇ ಕುಮಾರಸ್ವಾಮಿ ಯನ್ನು ಸಾಕಿದ್ದೇ ನಾನು. ಅವರ ಇತಿಹಾಸ ನನ್ನ ಬಳಿ ಇದೆ. ನನ್ನ ತಂಟೆಗೆ ಬಂದರೆ ಅವೆಲ್ಲವನ್ನೂ ಬಿಚ್ಚಿಡಬೇಕಾಗುತ್ತದೆ ಎಂದರು.
ಮುಂದುವರಿದು ಮಾತನಾಡಿರುವ ಅವರು, ನನಗೆ ದೇವೇಗೌಡರ ಮೇಲೆ ಋಣ ಇದೆ. ನಾನು ಶಾಸಕನಾಗಲು ಅವರು ಕಾರಣ. ಕುಮಾರಸ್ವಾಮಿಯಿಂದಾಗಿ ನಾನು ಶಾಸಕನಾಗಿಲ್ಲ ಎಂದರು.