ಗುಜರಿ ಅಂಗಡಿಯಲ್ಲಿ ಭಾರೀ ಪ್ರಮಾಣದಲ್ಲಿ Gas cylinderಗಳು ಪತ್ತೆ?
Monday, October 25, 2021
ಭೋಪಾಲ್: ಮಧ್ಯಪ್ರದೇಶದ ಬಿಂಡ್ ಜಿಲ್ಲೆಯ ಗುಜರಿ ಅಂಗಡಿಯಲ್ಲಿ ಭಾರೀ ಪ್ರಮಾಣದಲ್ಲಿ ಖಾಲಿಯಾದ ಗ್ಯಾಸ್ ಸಿಲಿಂಡರ್ ಗಳು ಪತ್ತೆಯಾಗಿದ್ದು, ಈ ವೀಡಿಯೋ ವನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಅಡುಗೆ ಅನಿಲದ ದರದಲ್ಲಿ ತೀವ್ರ ಏರಿಕೆಯ ಹಿನ್ನೆಲೆಯಲ್ಲಿ ಜನ ಸಾಮಾನ್ಯರು ಈ ರೀತಿ ಮಾಡಿರಬಹುದೆಂದು ಮಧ್ಯಪ್ರದೇಶದ ಕಾಂಗ್ರೆಸ್ ಆರೋಪಿಸಿದೆ.
ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರು ಮಾರಾಟ ಮಾಡಿರುವ ಸಿಲಿಂಡರ್ ಗಳೇ ಇಂದು ಗುಜರಿ ಅಂಗಡಿ ಸೇರಿದೆ ಎಂದು ಕಾಂಗ್ರೆಸ್ ಅಭಿಪ್ರಾಯ ಪಟ್ಟಿದೆ.
ಇದು ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಇದು ಮೋದಿ ಆಡಳಿತದ ಕಾರ್ಯವೈಖರಿಯನ್ನು ಸೂಚಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ, ಸ್ಟವ್ ನೀಡುವ ಜತೆಗೆ ಮೊದಲ ಬಾರಿ ಉಚಿತವಾಗಿ ರಿಫಿಲ್ ಸೌಲಭ್ಯ ನೀಡಲಾಗುತ್ತಿತ್ತು. ಇದೀಗ ಮತ್ತೆ ಮತ್ತೆ ರಿಫಿಲ್ ಮಾಡದ ಕಾರಣ ಜನ ಮಾರಾಟ ಮಾಡಿರಬಹುದೆಂದು ಅಂದಾಜಿಸಲಾಗಿದೆ.