Kidney failure: ಹಂದಿಯ ಕಿಡ್ನಿ ಮನುಷ್ಯರಿಗೆ suit ಆಗುತ್ತಾ? ವೈದ್ಯರ ಸಂಶೋಧನೆ ಏನು ಹೇಳುತ್ತೆ?
Thursday, October 21, 2021
ನ್ಯೂಯಾರ್ಕ್: ನ್ಯೂಯಾರ್ಕ್ ಸಿಟಿಯ ಎನ್ವೈಯು ಲ್ಯಾಂಗೋನ್ ಹೆಲ್ತ್ನಲ್ಲಿ ಮನುಷ್ಯನಿಗೆ ಹಂದಿಯ ಕಿಡ್ನಿಯನ್ನು ಕಸಿ ಮಾಡಲಾಗಿದ್ದು, ಸದ್ಯ ಮಾನವ ದೇಹದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ತಿಳಿದುಬಂದಿದೆ.
ಈ ಕಸಿಯು ವೈದ್ಯಕೀಯ ಲೋಕದಲ್ಲಿ ದೊಡ್ಡ ಕ್ರಾಂತಿಯಾಗಿದ್ದು, ಇದು ಸಂಪೂರ್ಣ ಯಶಸ್ವಿಯಾದರೆ, ಮನಷ್ಯರಿಗೆ ಕಿಡ್ನಿ ಕೊರತೆಗೆ ಬಹುದೊಡ್ಡ ಪರಿಹಾರ ಸಿಕ್ಕಂತಾಗುತ್ತದೆ.
ಈ ಪ್ರಯೋಗ ಕಸಿಯಲ್ಲಿ ಬಳಸಲಾಗಿದ್ದ ಹಂದಿಯ ಕಿಡ್ನಿಯ ಪ್ರತಿರಕ್ಷಣಾ ವ್ಯವಸ್ಥೆಯು ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸುವುದನ್ನು ತಪ್ಪಿಸುವ ಸಲುವಾಗಿ ಅದರ ವಂಶವಾಹಿಗಳನ್ನು ತೆಗೆದು ಹಾಕಲಾಗಿತ್ತು.
ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಲ್ಲಿ ಈ ಕಸಿ ಚಿಕಿತ್ಸೆ ಪ್ರಯೋಗ ಮಾಡಲಾಗಿದ್ದು, ಈ ರೋಗಿಯು ಕಿಡ್ನಿ ಸಂಬಂಧಿ ಸಮಸ್ಯೆಯನ್ನು ಹೊಂದಿದ್ದರು. ಈ ರೋಗಿಯ ಮೇಲೆ ಈ ಪ್ರಯೋಗವನ್ನು ಮಾಡಲು ಕುಟುಂಬಸ್ಥರು ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಈ ಕಸಿ ಮಾಡಲಾಗಿತ್ತು.