'ಪ್ರೀತಿಸಿ ನನ್ನನ್ನು ಎಲ್ಲಾ ರೀತಿಯಲ್ಲೂ ಬಳಸಿಕೊಂಡ': ಭಗ್ನ ಪ್ರೇಮಿಯ death note details ಇಲ್ಲಿದೆ
Monday, October 18, 2021
ನಂಜನಗೂಡು: ಯುವಕನ ಪ್ರೀತಿಯ ಬಲೆಯಲ್ಲಿ ಬಿದ್ದು, ಕೊನೆಗೆ ಆತ ಕೈಕೊಟ್ಟಾಗ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ಇಲ್ಲಿನ ಚನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ.
ಸದ್ಯ ಆಕೆಯ ಡೆತ್‌ನೋಟ್ ಪೊಲೀಸರಿಗೆ ದೊರೆತಿದ್ದು, ಬಹಳಷ್ಟು ವಿಚಾರಗಳು ಬಯಲಿಗೆ ಬಂದಿದೆ.
ಇಲ್ಲಿನ ಕಾಲೇಜೊಂದರಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದ ಶೋಭಾ ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ ಐದು ವರ್ಷಗಳಿಂದ ಅದೇ ಗ್ರಾಮದ ಲೋಕೇಶ್ ಎಂಬಾತನ ಪ್ರೇಮದ ಬಲೆಯಲ್ಲಿ ಸಿಕ್ಕಿದ್ದಳು. ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಕೊನೆಗೂ ಲೋಕೇಶ್ ಕೈಕೊಟ್ಟಿದ್ದ.
ಮದುವೆಯಾಗುವುದಾಗಿ ನಂಬಿಸಿ 5 ವರ್ಷಗಳ ಕಾಲ ನನ್ನನ್ನು ಪ್ರೀತಿಸಿ ಎಲ್ಲ ರೀತಿಯಲ್ಲೂ ಬಳಸಿಕೊಂಡು ನಂತರ ಮೋಸ ಮಾಡಿರುವ ಲೋಕೇಶನನ್ನು ಗಲ್ಲೆಗೇರಿಸಬೇಕು ಎಂದು ಶೊಭಾ ಡೆತ್ ನೊಟ್‌ನಲ್ಲಿ ಬರೆದಿಟ್ಟಿದ್ದಳು.
ಯುವತಿಯ ತಾತ ಚೆನ್ನ ಪಟ್ಟಣನ ಕರಿಯ್ಯಯ್ಯ ಹುಲ್ಲಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.