
ಇವಳೆಂತಾ ಮಗಳು?: ಬೈತಾರೆ ಎಂದು ಪೋಷಕರಿಗೇ ವಿಷವುಣಿಸಿ ಕೊಂದಳು!
ಚಿತ್ರದುರ್ಗ: ತನ್ನನ್ನು ಪೋಷಕರು ಕೆಲಸಕ್ಕೆ ಹೋಗುವಂತೆ ಒತ್ತಾಯಿಸುತ್ತಾರೆ ಮತ್ತು ಹೋಗದಿದ್ದಲ್ಲಿ ನಿರಂತರ ಬೈಯ್ತಾರೆ ಎಂದು ರೋಸಿಹೋದ ಯುವತಿಯೊಬ್ಬಳು ತನ್ನ ಪೋಷಕರನ್ನೇ ವಿಷವುಣಿಸಿ ಕೊಂದ ದಾರುಣ ಘಟನೆ ಇಲ್ಲಿನ ಇಸಾಮುದ್ರ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಯುವತಿಯ ಆಕ್ರೋಷಕ್ಕೆ ಒಟ್ಟು ನಾಲ್ಕು ಮಂದಿ ಬಲಿಯಾಗಿದ್ದು, ಓರ್ವ ಯುವಕ ಚೇತರಿಸಿಕೊಂಡಿದ್ದಾನೆ.
ಘಟನೆಯಲ್ಲಿ ಯುವತಿಯ ತಂದೆ ತಿಪ್ಪಾ ನಾಯ್ಕ, ತಾಯಿ ಸುಧಾಬಾಯಿ, ತಂಗಿ ರಮ್ಯಾ ಹಾಗೂ ಅಜ್ಜಿ ಗುಂಡಿಬಾಯಿ ಮೃತ ಪಟ್ಟಿದ್ದಾರೆ. ಯುವತಿಯ ಸಹೋದರ ರಾಹುಲ್ ಚೇತರಿಸಿಕೊಂಡಿದ್ದಾನೆ.
ಏನಿದು ಘಟನೆ: ಆರ್ಥಿಕವಾಗಿ ಹಿಂದುಳಿದಿರುವ ಈ ಕುಟುಂಬ ಮಗಳನ್ನು ಕೂಡಾ ಕೆಲಸಕ್ಕೆ ತಮ್ಮ ಜೊತೆ ಕರೆದೊಯ್ಯುತ್ತಿದ್ದರು. ಆದರೆ ಯುವತಿಗೆ ಕೆಲಸಕ್ಕೆ ಹೋಗುದು ಇಷ್ಟ ಇರಲಿಲ್ಲ. ಈ ಕಾರಣಕ್ಕಾಗಿ ಅವಳು ಕೆಲಸಕ್ಕೂ ಹೋಗುತ್ತಿರಲಿಲ್ಲ. ಇದಕ್ಕೆ ಮನೆಮಂದಿಯೆಲ್ಲಾ ಆಕೆಯನ್ನು ಬೈಯುತ್ತಿದ್ದರು. ಇದರಿಂದ ರೋಸಿಹೋದ ಯುವತಿಯ ವಿಷವುಣಿಸಿ ಕೊಲೆ ಮಾಡಿದ್ದಾಳೆ.
ಜುಲೈ 13ರಂದು ರಾತ್ರಿ ಕೆಲಸ ಮುಗಿಸಿ ಎಲ್ಲರೂ ಮನೆಗೆ ಬಂದಿದ್ದೂ ಊಟಕ್ಕೆ ಸಿದ್ದರಾಗಿದ್ದರು. ಈ ವೇಳೆ ಕರೆಂಟ್ ಹೋಗಿದ್ದು, ಈ ಸಮಯ ಯುವತಿ ರಾತ್ರಿ ಊಟಕ್ಕೆ ಇಟ್ಟಿದ್ದ ರಾಗಿ ಮುದ್ದೆಗೆ ವಿಷ ಬೆರೆಸಿದ್ದಾಳೆ ಎಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ.
ಜುಲೈನಲ್ಲಿ ಈ ಘಟನೆ ನಡೆದಿದ್ದು, ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ವಿಷ ಸೇವಿಸಿ ಮೃತಪಟ್ಟ ವಿಚಾರ ಬೆಳಕಿಗೆ ಬಂದಿತ್ತು