
ಬಿಜೆಪಿ ಮುಖಂಡರು ಸತ್ರೆ ನಾವೇ ಒಂದು ಕೋಟಿ ರೂ ಕೊಡ್ತೇವೆ: ವಿವಾದಾತ್ಮಕ ಭಾಷಣ ಮಾಡಿದ ಕಾಂಗ್ರೆಸ್ ಶಾಸಕ
ಕೊಪ್ಪಳ: ಉತ್ತರ ಪ್ರದೇಶದಲ್ಲಿ ಕೇಂದ್ರ ಸಚಿವನ ಪುತ್ರನ ಕಾರು ಹರಿದು ಮೃತಪಟ್ಟ ಘಟನೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಶಾಸಕನೋರ್ವ ವಿವಾದಾತ್ಮಕ ಭಾಷಣ ಮಾಡಿದ್ದಾರೆ.
ಕುಷ್ಟಗಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ್, ಉತ್ತರ ಪ್ರದೇಶದಲ್ಲಿ ಮೃತಪಟ್ಟ ಪ್ರತಿಭಟನಾ ನಿರತ ರೈತರ ಕುಟುಂಬಕ್ಕೆ ಕೇವಲ 45 ಲಕ್ಷ ರೂ ಪರಿಹಾರ ನೀಡಲಾಗಿದೆ. ಆದರೆ ಬಿಜೆಪಿ ಮುಖಂಡರು ಯಾರಾದರೂ ಸತ್ರೆ ನಾವೇ ಒಂದು ಕೋಟಿ ರೂಪಾಯಿ ಪರಿಹಾರ ಕೊಡ್ತೇವೆ ಎಂದು ವಿವಾದಾತ್ಮಕ ವಾಗಿ ಮಾತನಾಡಿದ್ದಾರೆ.
ಕೇಂದ್ರ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರಕರಣದಲ್ಲಿ ಕೇಂದ್ರ ಸಚಿವನ ಪುತ್ರನೇ ಇರುವುದರಿಂದ ಯಾರೂ ಮಾತನಾಡುತ್ತಿಲ್ಲ ಎಂದು ಅವರು ಆರೋಪಿಸಿದರು.