
Belagavi: ಧಾರಾಕಾರ ಮಳೆಗೆ ಕುಸಿದ ಮನೆ: 7 ಮಂದಿ ಮೃತ್ಯು
Wednesday, October 6, 2021
ಬೆಳಗಾವಿ: ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿದ್ದ ಭಾರೀ ಮಳೆಗೆ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು, ಒಂದೇ ಕುಟುಂಬದ 6 ಜನರ ಸಹಿತ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.
ಮೃತಪಟ್ಟವರ ಪೈಕಿ ಇಬ್ಬರು ಸಣ್ಣ ಮಕ್ಕಳಿದ್ದರು. ಹಳೆಯ ಮನೆಯನ್ನು ರಿಪೇರಿ ಮಾಡುವ ನಿಟ್ಟಿನಲ್ಲಿ ಮನೆಯ ಛಾವಣಿ ತೆಗೆದಿರಿಸಲಾಗಿತ್ತು. ಮತ್ತು ಮನೆಯವರೆಲ್ಲಾ ಪಕ್ಕದಲ್ಲೇ ತಾತ್ಕಾಲಿಕ ಶೆಡ್ ನಿರ್ಮಿಸಿ ವಾಸ್ತವ್ಯ ಹೂಡಿದ್ದರು ಆದರೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಅಲ್ಲೇ ಇದ್ದವರ ಮೈಮೇಲೆ ಬಿದ್ದಿದೆ.
5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ.
ಮನೆಯ ಯಜಮಾನ ಮತ್ತು ಅವರ ಒಬ್ಬ ಮಗ ಅದೃಷ್ಟವಶಾತ್ ಬದುಕುಳಿದಿದ್ದಾರೆ.