ಅಡುಗೆ ಅನಿಲದ ದರ ಮತ್ತೆ 15 ರೂ. ಏರಿಕೆ: ಇದು ಮೋದಿಯ ನವರಾತ್ರಿ ಗಿಫ್ಟ್ ಎಂದು ಕುಟುಕಿದ ನೆಟ್ಟಿಗರು
Wednesday, October 6, 2021
ನವ ದೆಹಲಿ: ಅಡುಗೆ ಸಿಲಿಂಡರಿನ ದರದಲ್ಲಿ ಇಂದು ಮತ್ತೆ ಏರಿಕೆಯಾಗಿದ್ದು, ಸಿಲಿಂಡರ್ ಒಂದಕ್ಕೆ 15 ರೂ ಹೆಚ್ಚಳವಾಗಿದೆ.
ಈ ರೀತಿ ಏರಿಕೆಯಾಗುವ ಮೂಲಕ ಕಳೆದ ಆರು ತಿಂಗಳಲ್ಲಿ ಒಟ್ಟು 205 ರೂ ಹೆಚ್ಚಳವಾಗಿದೆ.
ಕೇವಲ 2 ತಿಂಗಳಲ್ಲಿ 8 ಬಾರಿ ಅಡುಗೆ ಅನಿಲದ ಬೆಲೆ ಹೆಚ್ಚಾಗಿದ್ದು, ಬಡ ಗ್ರಾಹಕರಿಗೆ ಸಂಕಷ್ಟ ತಂದೊಡ್ಡಿದೆ.
ತಿಂಗಳ ಮೊದಲ ದಿನ ತೈಲ ಕಂಪನಿಗಳು ಅಡುಗೆ ಅನಿಲದ ದರವನ್ನು ಪರಿಷ್ಕರಿಸುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಅನಿಲದ ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಯನ್ನಾಧರಿಸಿ ಆಮದು ಶುಲ್ಕ, ಅಬಕಾರಿ ಶುಲ್ಕ, ಜಿಎಸ್‌ಟಿ ಪರಿಗಣಿಸಿ ಪ್ರತಿ ತಿಂಗಳು ಅಡುಗೆ ಅನಿಲ ಬೆಲೆಯನ್ನು ಪರಿಷ್ಕರಿಸಲಾಗುತ್ತದೆ.