-->

ಎ.ಪಿ ಅಬೂಬಕರ್ ಮುಸ್ಲಿಯಾರ್‌ಗೆ UAE golden visa: ಏನಿದು ಗೋಲ್ಡನ್‌ ವೀಸಾ?

ಎ.ಪಿ ಅಬೂಬಕರ್ ಮುಸ್ಲಿಯಾರ್‌ಗೆ UAE golden visa: ಏನಿದು ಗೋಲ್ಡನ್‌ ವೀಸಾ?

ದುಬೈ: ಕೇರಳದ ಪ್ರಸಿದ್ಧ ಮುಸ್ಲಿಂ ಧರ್ಮ ಗುರು ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಎಂದೇ ಪ್ರಸಿದ್ದರಾದ ಶೈಖ್ ಅಬೂಬಕರ್ ಅಹ್ಮದ್ ರವರಿಗೆ ಯುಎಇ ಸರಕಾರದ ಗೋಲ್ಡನ್ ವೀಸಾ ದೊರೆತಿದೆ.


ಉದ್ಯಮ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಹೆಸರುಗಳಿಸಿದ ಗಣ್ಯರಿಗೆ ಯುಎಇ ಸರಕಾರವು ಈ ವಿಶೇಷ ವಿಸಾ ನೀಡುತ್ತದೆ.

ಏನಿದು ಗೋಲ್ಡನ್ ವೀಸಾ: ಯುಎಇ ಸರಕಾರವು 2019ರಲ್ಲಿ ಈ ಗೋಲ್ಡನ್ ವೀಸಾವನ್ನು ಪರಿಚಯಿಸಿದ್ದು, ಇದು ಯುಎಇಯಲ್ಲಿ ದೀರ್ಘ ಕಾಲ ವಾಸ್ತವ್ಯ ಹೊಂದಲು ಅನುಮತಿಸುವ ವಿಸಾ ಆಗಿದೆ.


ಈ ವೀಸಾ ಹೊಂದಿರುವವರು ಯುಎಇಯಲ್ಲಿ ಯಾವುದೇ ಪ್ರಾಯೋಜಕರ ಅಗತ್ಯವಿಲ್ಲದೆ ಕೆಲಸ, ಕಲಿಕೆ ಅಥವಾ ಉದ್ಯಮವನ್ನು ಮಾಡಬಹುದು.
ಅಲ್ಲದೇ ಉದ್ಯಮದ ಶೇಕಡಾ 100ರಷ್ಟು ಮಾಲಕತ್ವವು ಈ ವಿಸಾ ಹೊಂದಿದವರಿಗೆ ಲಭಿಸುತ್ತದೆ.
ಈ ವಿಸಾಗೆ 5 ರಿಂದ 10 ವರ್ಷಗಳ ಕಾಲ ಮಿತಿ ಇದ್ದು, ನವೀಕರಣಕ್ಕೂ ಅವಕಾಶವಿದೆ.


ಈ ವಿಸಾ ಹೊಂದಿರುವವರು ಇದನ್ನು ತಮ್ಮ ಪತ್ನಿ, ಮಕ್ಕಳು, ತಂದೆ ತಾಯಿ ಅಥವಾ ಇತರರಿಗೂ ವಿಸ್ತರಿಸುವ ಅವಕಾಶವಿದೆ.


ಚಿತ್ರನಟರಾದ ಮಮ್ಮುಟ್ಟಿ, ಮೋಹನ್ ಲಾಲ್ ಸಹಿತ ಹಲವು ಭಾರತೀಯರು ಈ ವೀಸಾ ಪಡೆದಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99