ಅವನತಿಯತ್ತ BSNL: ಸಾಲ ತೀರಿಸಲು ಕೇಂದ್ರದ ಮೊರೆ- ಅವನತಿಗೆ ಇಲ್ಲಿದೆ ಕಾರಣ
ನವದೆಹಲಿ: ಇಂದು ಬಿಎಸ್ಸೆನ್ನೆಲ್ ದಿನ. ಭಾರತದಾದ್ಯಂತ ಟೆಲಿಕಮ್ಯೂನಿಕೇಶನ್ ಸೇವೆ ಒದಗಿಸಿದ ಬಿಎಸ್ಸೆನ್ನೆಲ್ ಇಂದು ಸೇವೆಯ 21ನೇ ವರ್ಷಕ್ಕೆ ಕಾಲಿರಿಸಿದೆ. ಹಾಗಂತ ಸರಕಾರಿ ಸ್ವಾಮ್ಯದ ಈ ಬಿಎಸ್ಸೆನ್ನೆಲ್ ಸಂಸ್ಥೆ ಈಗ ಖುಷಿಯಲ್ಲಿ ಏನೂ ಇಲ್ಲ. ಬದಲಾದ ಕಾಲ ಮತ್ತು ಪೈಪೋಟಿಯಿಂದಾಗಿ ಬಿಎಸ್ಸೆನ್ನೆಲ್ ಅವನತಿಯತ್ತ ಸಾಗುತ್ತಿದೆ.
ಖಾಸಗಿ ಸಂಸ್ಥೆಗಳ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲಾಗದೇ ಬಿಎಸ್ಸೆನ್ನೆಲ್ ಅವನತಿಯತ್ತ ಸಾಗುತ್ತಿದೆ. ಅಲ್ಲದೇ ಬಿಎಸ್‍ಎನ್ನೆಲ್‍ನ ಚಂದಾದಾರರೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದಾರೆ. 2008ರಲ್ಲಿ 80 ಕೋಟಿ ಇದ್ದ ಬಿಎಸ್‍ಎನ್ನೆಲ್‍ನ ಚಂದಾದಾರರ ಸಂಖ್ಯೆ 2010ರಲ್ಲಿ 80 ಲಕ್ಷಕ್ಕೆ ಇಳಿದಿದೆ.
ಅಲ್ಲದೇ ಸಂಸ್ಥೆಯ ಹೊಣೆಗಾರಿಕೆ (ಲಯಬಿಲಿಟಿ) ಮತ್ತು ಸಾಲ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಹೊಣೆಗಾರಿಕೆ ಅವಧಿಯನ್ನು 2022ರ ತನಕ ವಿಸ್ತರಣೆ ಮಾಡಲಾಗಿದೆ. ಆದರೆ ಸಾಲವನ್ನು ತೀರಿಸಲು ಸಂಸ್ಥೆಯು ಕೇಂದ್ರ ಸರಕಾರದ ಮೊರೆ ಹೋಗಿದೆ. ಸಾಲ ತೀರಿಸುವ ಸಲುವಾಗಿ 40 ಸಾವಿರ ಕೋಟಿ ರುಪಾಯಿಯನ್ನು ಸಂಸ್ಥೆಯು ಕೇಂದ್ರ ಸರಕಾರದ ಬಳಿ ಕೇಳಿಕೊಂಡಿದೆ.
ಅಲ್ಪಾವಧಿ ಸಾಲ ಮತ್ತು ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಭಾರೀ ಪ್ರಮಾಣದ ಹಣದ ಅಗತ್ಯತೆ ಇದ್ದು, ಇದಕ್ಕಾಗಿ ಸಂಸ್ಥೆಯು ಸರಕಾರದ ಮೊರೆ ಹೋಗಿದೆ.
ಅವನತಿಗೆ ಕಾರಣಗಳೇನು?
ತಂತ್ರಜ್ಞಾನ, ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಹೂಡಿಕೆ ಮಾಡದಿರುವುದು
ಖಾಸಗಿ ನೆಟ್‍ವರ್ಕ್ ಸಂಸ್ಥೆಗಳ ಪೈಪೋಟಿಯನ್ನು ಎದುರಿಸಲಾಗದಿರುವುದು
ಗ್ರಾಹಕರ ಅಸಂತೃಪ್ತಿ
ಕ್ಷೀಣಿಸಿದ ನೆಟ್‍ವರ್ಕ್ ಕ್ಷಮತೆ