
Hitler: ಅಬ್ಬಬ್ಬಾ! ಹಿಟ್ಲರ್ ಜೊತೆ ಸೇರಿ 11 ಸಾವಿರ ಯಹೂದಿಗಳ ಮಾರಣ ಹೋಮಕ್ಕೆ ನೆರವಾಗಿದ್ದ ಆ 20 ವರ್ಷದ ಯುವತಿಗೆ ಮತ್ತೆ ಸಂಕಷ್ಟ
Friday, October 1, 2021
ಬರ್ಲಿನ್: ಯಹೂದಿಗಳ ಮಾರಣಹೋಮ ಮಾಡಿದ್ದ ಹಿಟ್ಲರ್ ಕ್ರೂರ ಕೃತ್ಯದ ಬಗ್ಗೆ ಇಂದಿಗೂ ಇತಿಹಾಸ ನೆನಪಿಸುತ್ತಿದೆ. ಆದರೆ ಅಂದು ಹಿಟ್ಲರ್‌ನ ಕ್ರೂರ ಕೃತ್ಯಗಳಿಗೆ ನೆರವಾಗಿದ್ದ ಆತನ 20 ವರ್ಷದ ಕಾರ್ಯದರ್ಶಿಗೆ ಈಗ ಮತ್ತೆ ಸಂಕಷ್ಟ ಎದುರಾಗಿದೆ.
ಸದ್ಯ 96 ವರ್ಷ ಪ್ರಾಯ ಹೊಂದಿರುವ ಇಂಗಾರ್ಡ್ ಫು಼ಷ್ನರ್, 1943-45ರ ಸಂದರ್ಭದಲ್ಲಿ ಹಿಟ್ಲರ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು.
ಅಲ್ಲದೆ ಸುಮಾರು 11 ಸಾವಿರದಷ್ಡು ಯಹೂದಿಗಳ ಮಾರಣಹೋಮಕ್ಕೆ ಈಕೆ ಕಾರಣ ಕರ್ತಳಾಗಿದ್ದಳು ಎಂಬ ಆರೋಪ ಆಕೆಯ ಮೇಲಿದೆ.
ಈ ಕುರಿತಂತೆ ಅನೇಕ ವಿಚಾರಣೆಗಳನ್ನು ಎದುರಿಸಿದ್ದ ಇಂಗಾರ್ಡ್‌ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಇದೀಗ ಮತ್ತೆ ಸಂಕಷ್ಟ ಎದುರಾಗಿರುವುದನ್ನು ಅರಿತ ಇಂಗಾರ್ಡ್ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಂಡಿದ್ದಾಳೆ.
ಇಳಿ ವಯಸ್ಸಿನಲ್ಲಿ ಆಕೆ ತಪ್ಪಿಸಿಕೊಂಡಿದ್ದು, ತನಿಖಾಧಿಕಾರಿಗಳನ್ನ ಬೆಸ್ತು ಬೀಳಿಸಿದ್ದು, ಆಕೆಯ ಪತ್ತೆಗೆ ಬಲೆ ಬೀಸಿದ್ದಾರೆ.