ನವದೆಹಲಿ: ವಾಣಿಜ್ಯ ಉದ್ದೇಶದ ಗ್ಯಾಸ್ ಸಿಲಿಂಡರ್ ಮೇಲೆ ಇಂದಿನಿಂದ ಅನ್ವಯವಾಗುವಂತೆ 43.5 ರೂ ಹೆಚ್ಚಳವಾಗಿದೆ.
ತೈಲ ಕಂಪನಿಯಾದ ಇಂಡಿಯನ್ ಆಯಿಲ್‍ನವರು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‍ನ ಬೆಲೆಯನ್ನು ಹೆಚ್ಚಿಸಿದ್ದಾರೆ.
ಈ ದರವು ಅಡುಗೆ ಅನಿಲಕ್ಕೆ ಅನ್ವಯವಾಗುವುದಿಲ್ಲ ಎಂಬುದು ಸಮಾಧಾನದ ಸಂಗತಿ. ಇದನ್ನು ಹೊರತು ಪಡಿಸಿ ಹೊಟೇಲ್, ವಾಹನ ಕಾರ್ಖಾನೆ ಮೊದಲಾದ ಸಿಲಿಂಡರ್ ಬೆಲೆ ಜಾಸ್ತಿ ಆಗಲಿದೆ.
19 ಕೆಜಿ ತೂಕದ ಈ ಸಿಲಿಂಡರ್‍ನ ಬೆಲೆಯು ದೆಹಲಿಯಲ್ಲಿ 1736.5ಕ್ಕೆ ಏರಿದೆ.