-->

ಚೀನಾಕ್ಕೆ ಅಪ್ಪಳಿಸಿದ ಮತ್ತೊಂದು ಮಹಾಮಾರಿ: ಸೋಂಕಿತರ ಪೈಕಿ ಅರ್ಧದಷ್ಟು ಜನ ಸಾವು

ಚೀನಾಕ್ಕೆ ಅಪ್ಪಳಿಸಿದ ಮತ್ತೊಂದು ಮಹಾಮಾರಿ: ಸೋಂಕಿತರ ಪೈಕಿ ಅರ್ಧದಷ್ಟು ಜನ ಸಾವು

ನ್ಯುಯಾರ್ಕ್: ಚೀನಾದಲ್ಲಿ, ಮಾರಣಾಂತಿಕ ಹಕ್ಕಿ ಜ್ವರ ರೂಪಾಂತರ H5N6ನ ಕಾಣಿಸಿಕೊಂಡಿದ್ದು, ಸೋಂಕಿತರ ಪೈಕಿ ಅರ್ಧದಷ್ಟು ಮಂದಿ ಸಾವನ್ನಪ್ಪಿದ್ದಾರೆ.
ಚೀನಾದಲ್ಲಿ ಕಂಡು ಬಂದಿರುವ ರೂಪಾಂತರಿತ  ಹಕ್ಕಿ ಜ್ವರದ (Bird Flu) ಬಗ್ಗೆ ವಿಶ್ವ ಸಂಸ್ಥೆ ಕಳವಳ ವ್ಯಕ್ತಪಡಿಸಿದ್ದು, ಈ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

ಚೀನಾದಲ್ಲಿ ಮತ್ತು ಹಕ್ಕಿ ಜ್ವರ ಪೀಡಿತ ಪ್ರದೇಶಗಳಲ್ಲಿ ಅದರ ಅಪಾಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಿಗಾ ಇರಿಸಬೇಕಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ಚೀನಾದ ರೋಗ ನಿಯಂತ್ರಣ ಕೇಂದ್ರವೂ H5N6 ಹಕ್ಕಿ ಜ್ವರ (H5N6 Bird Flu Variant) ರೂಪಾಂತರದಿಂದ ಉಂಟಾಗುವ ಗಂಭೀರ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. 

ಇದು ಹರಡಲ್ಲ: 
ನೆಮ್ಮದಿಯ ವಿಚಾರವೆಂದರೆ, ಈ ವೈರಸ್‌ ಮನುಷ್ಯರಿಂದ ಮನುಷ್ಯರಿಗೆ ಹರಡುವ ಬಗ್ಗೆ ಯಾವುದೇ ಪ್ರಕರಣಗಳು ಇದುವರೆಗೆ ಕಂಡುಬಂದಿಲ್ಲ ಎಂದು WHO ಹೇಳಿದೆ. ಶೀತ, ನ್ಯುಮೋನಿಯಾದ ಲಕ್ಷಣಗಳೇ ಈ ಜ್ವರದಲ್ಲೂ ಕಂಡುಬರುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಎಚ್ಚರಿಕೆ ಹೇಗೆ?
ಅನಾರೋಗ್ಯ ಪೀಡಿತ ಅಥವಾ ಸತ್ತ ಕೋಳಿ ಅಥವಾ ಪಕ್ಷಿಗಳಿಂದ ಜನ ದೂರವಿರಬೇಕು.  ಜೀವಂತ ಪಕ್ಷಿಗಳೊಂದಿಗೆ ನೇರ ಸಂಪರ್ಕವನ್ನು ಇಟ್ಟುಕೊಳ್ಳಬಾರದು. ಜ್ವರ ಮತ್ತು ಉಸಿರಾಟದ ಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷೆಗೆ ಒಳಗಾಗಬೇಕು ಎಂದು ತಜ್ಞರು ಸೂಚಿಸಿದ್ದಾರೆ.Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99