Airportನಲ್ಲಿ ಸಂಪೂರ್ಣ ವಿವಸ್ತ್ರಳಾಗಿ ನಡೆದ ಯುವತಿ: ಭದ್ರತಾ ಸಿಬ್ಬಂದಿ ಹೊದಿಸಿದ ಹೊದಿಕೆಯನ್ನೂ ಎಸೆದಳು: ಅವಳ್ಯಾಕೆ ಹೀಗೆ?
Thursday, October 21, 2021
ಡೆನ್ವಾರ್: ಡೆನ್ವಾರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ಯುವತಿಯೋರ್ವಳು ವಿವಸ್ತ್ರಳಾಗಿ ನಡೆದು, ಸಿಬ್ಬಂದಿ ಮತ್ತು ಸಹಪ್ರಯಾಣಿಕರನ್ನು ಇರಿಸು ಮುರಿಸು ಮಾಡಿರುವ ಘಟನೆ ನಡೆದಿದೆ.
ಗೇಟ್ A 37 ಬಳಿ ಯುವತಿಯೋರ್ವಳು ಮೈಮೇಲೆ ಒಂದು ತುಂಡೂ ಬಟ್ಟೆ ಇಲ್ಲದೇ ನಡೆದಾಡುತ್ತಿದ್ದಾಳೆಂದು ಭದ್ರತಾ ಸಿಬ್ಬಂದಿಗೆ ಸಹಪ್ರಯಾಣಿಕರು ದೂರಿದ್ದರು. ಈ ವೇಳೆ ಸಿಬ್ಬಂದಿಗಳು ಆಕೆಯ ಬಳಿ ಹೊದಿಕೆಯೊಂದಿಗೆ ದೌಡಾಯಿಸಿದ್ದಾರೆ.
ವಿವಸ್ತ್ರಳಾಗಿ ನಡೆಯುತ್ತಿದ್ದ ಯುವತಿಗೆ ಹೊದಿಕೆಯನ್ನು ಹೊದಿಸಿದ್ದು, ಆಕೆ ಅದನ್ನು ದೂರ ಎಸೆದಿದ್ದಾಳೆ.
ಯುವತಿಯ ಬಳಿ ಯಾವುದೇ ಲಗೇಜುಗಳು ಇದ್ದಿರಲಿಲ್ಲ. ಮತ್ತು ಆಕೆ ಯಾವುದೇ ಆತಂಕ ಇಲ್ಲದೇ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಳು ಎಂದು ಅಲ್ಲಿನ ಸ್ಥಳೀಯ ವಾಹಿನಿಯೊಂದು ವರದಿ ಮಾಡಿದೆ.
ಆಕೆಯ ಬಳಿ ತೆರಳಿದ ಮತ್ತೋರ್ವ ಮಹಿಳಾ ಪ್ರಯಾಣಿಕೆ ನಿನ್ನ ಊರು ಯಾವುದು? ಯಾಕೆ ಈ ರೀತಿ ವರ್ತಿಸುತ್ತೀ ಎಂದು ಪ್ರಶ್ನಿಸಿದಾಗ ಯುವತಿ ಕೇವಲ ನಗುವಿನ ಮೂಲಕವೇ ಉತ್ತರಿಸಿದ್ದಳು.
ಸುದೀರ್ಘ ಪರಿಶ್ರಮದ ಬಳಿಕ ಭದ್ರತಾ ಸಿಬ್ಬಂದಿ ಆಕೆಯನ್ನು ಹೊದಿಕೆಯಲ್ಲಿ ಸುತ್ತಿ ಆಂಬುಲೆನ್ಸ್‌ನಲ್ಲಿ ಸಾಗಿಸಿದ್ದಾರೆ.
ಯುವತಿ ಮಧ್ಯಪಾನ ಮಾಡಿದ್ದೂ, ಕೆಲ ಆರೋಗ್ಯ ಸಮಸ್ಯೆಯೂ ಆಕೆಗೆ ಇತ್ತು ಎನ್ನಲಾಗಿದೆ.