ಉತ್ತರಖಾಂಡ: ಇಲ್ಲಿ 20 ರೂ. ಉಪ್ಪಿಗೆ 120 ರೂ. - ಅಕ್ಕಿ, ಸಕ್ಕರೆ, ನೀರುಳ್ಳಿ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ!
Sunday, October 3, 2021
ಪಿತೋರ್‌ಘಡ್: ಉತ್ತರಕಾಂಡ ರಾಜ್ಯದ ಪಿತೋರ್‌ಘಡ್ ಜಿಲ್ಲೆಯಲ್ಲಿ ದಿನಬಳಕೆ ವಸ್ತುಗಳ ಮೇಲೆ ದರಗಳು ಹೆಚ್ಚಾಗಿದ್ದು, 20 ರುಪಾಯಿಗೆ ಸಿಗುತ್ತಿದ್ದ ಉಪ್ಪಿನ ಪ್ಯಾಕೆಟ್‌ಗೆ 130 ರೂ. ಆಗಿದೆ.
ಅಲ್ಲದೇ ಅಗತ್ಯ ಬಳಲೆ ವಸ್ತುಗಳಾದ ಅಕ್ಕಿ, ಸಕ್ಕರೆ, ಗೋಧಿ, ನೀರುಳ್ಳಿಯ ಬೆಲೆಯೂ 8 ಪಟ್ಟು ಹೆಚ್ಚಾಗಿದ್ದು, ಹಣದುಬ್ಬರವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಭಾರತ ಚೀನಾದ ಗಡಿ ಪ್ರದೇಶವಾದ ಇದು ಹಿಮಾಲಯದ ತಪ್ಪಲಿನ ಪ್ರದೇಶವಾಗಿದೆ.
ಹಿಮಪಾತದ ಹಿನ್ನೆಲೆಯಲ್ಲಿ ಇಲ್ಲಿನ ಹಲವು ರಸ್ತೆಗಳು ಮುಚ್ಚಲ್ಪಟ್ಟಿದ್ದು, ಸಂಪರ್ಕ ಸ್ಥಗಿತಗೊಂಡಿದೆ. ಈ ನಿಟ್ಟಿನಲ್ಲಿ ಸರಕು ಸಾಗಾಣಿಕೆ ಸಾಧ್ಯವಾಗದೇ ದರ ಏರಿಕೆಯಾಗಿದೆ.
ಅಗತ್ಯ ವಸ್ತುಗಳಾದ ಅಕ್ಕಿ ಕೆಜಿಗೆ 150 ರೂ ಆದರೆ, ಸಕ್ಕರೆ ಮತ್ತು ಹಿಟ್ಟಿಗೆ ಕೆಜಿಗೆ 160ನಂತೆ ಹೆಚ್ಚಳವಾಗಿದೆ. ಸಾಸಿವೆ ಎಣ್ಣೆಯ ಬೆಲೆ 300 ರೂ ತಲುಪಿದ್ದು, ಸಕ್ಕರೆಗೆ 130 ರೂ ಆಗಿದೆ. ಟೊಮೆಟೋ ಸಹಿತ ತರಕಾರಿಗಳ ಬೆಲೆಯೂ ಗಗನಕ್ಕೇರಿದ್ದು, ಜನ ಸಂಕಷ್ಟ ಪಡುವಂತಾಗಿದೆ.