
21 ಕೋಟಿ ರೂ. ಮೌಲ್ಯದ ಕೋಣ ಹೃದಯಾಘಾತದಿಂದ ಸಾವು: ಇದು ಅಂತಿಂತ ಕೋಣವಲ್ಲ - ಇದರ ವೀರ್ಯದಿಂದಲೇ ಮಾಲಕ ಸಂಪಾದಿಸುತ್ತಿದ್ದ ಕೋಟ್ಯಂತರ ರುಪಾಯಿ
Sunday, October 3, 2021
ಹರ್ಯಾಣ: ಹರಾಜಿನಲ್ಲಿ 21 ಕೋಟಿ ರುಪಾಯಷ್ಟು ಬೆಲೆ ಬಂದಿದ್ದ 1200 ಕೆಜಿಯ ಭಾರೀ ಸುದ್ದಿ ಮಾಡಿದ್ದ ಕೋಣವೊಂದು ಹೃದಯಾಘಾತದಿಂದ ಸಾವನ್ನಪ್ಪಿದೆ.
ಹರ್ಯಾಣದ ಕೈತಾಲ್‌ನ ನರೇಶ್ ಬೇನಿವಾಲ್ ಎಂಬವರಿಗೆ ಸೇರಿದ ಈ ಕೋಣಕ್ಕೆ ಹರಾಜಿನಲ್ಲಿ 21 ಕೋಟಿ ರೂ. ಬೆಲೆ ಬಂದಿದ್ದರೂ ಮಾಲಕ ಅದನನ್ನು ಯಾರಿಗೂ ನೀಡದೇ ತಾನೇ ಸಾಕಿಕೊಂಡಿದ್ದ.
ಸುಲ್ತಾನ್ ಮುರ್ರಾ ತಳಿಗೆ ಸೇರಿದ್ದ ಈ ಕೋಣವು ಮೇಳ, ಉತ್ಸವಗಳಿಗೆ ಬಂತೆಂದರೆ ಇದನ್ನು ನೋಡಲು ಜನ ಗುಂಪು ಸೇರುತ್ತಿದ್ದರು.
ಇದೊಂದು ವಿಶೇಷ ತಳಿಯ ಕೋಣವಾಗಿದ್ದರಿಂದ ಇದರ ವೀರ್ಯಕ್ಕೂ ಭಾರೀ ಬೇಡಿಕೆ ಇತ್ತು. ಮಾಲಕ ನರೇಶ್ ವರ್ಷವೊಂದಕ್ಕೆ 90 ಲಕ್ಷ ರುಪಾಯಿ ಇದರ ವೀರ್ಯದಿಂದಲೇ ಸಂಪಾದಿಸುತ್ತಿದ್ದ.