-->
ads hereindex.jpg
ಮೂಲ್ಕಿಯ ವಿಜಯಾ ಕಾಲೇಜಿನ ಗಣಿತ ಪ್ರಾಧ್ಯಾಪಕಿ ವಿಜಯಕುಮಾರಿ ನಿವೃತ್ತಿ- ಬೀಳ್ಕೊಡುಗೆ

ಮೂಲ್ಕಿಯ ವಿಜಯಾ ಕಾಲೇಜಿನ ಗಣಿತ ಪ್ರಾಧ್ಯಾಪಕಿ ವಿಜಯಕುಮಾರಿ ನಿವೃತ್ತಿ- ಬೀಳ್ಕೊಡುಗೆ

 ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಗಣಿತ ಪ್ರಾಧ್ಯಾಪಕರ ವೇದಿಕೆ (ಪಾರ್ಮ್ಯಾಟ್‌) ವತಿಯಿಂದ ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಗಣಿತ ಪ್ರಾಧ್ಯಾಪಕರಾಗಿದ್ದು ವಯೋನಿವೃತ್ತಿ ಹೊಂದಿದ ಡಾ. ವಿಜಯಕುಮಾರಿ ಅವರನ್ನು ಇತ್ತೀಚೆಗೆ ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು.

 

ಮಣಿಪಾಲ್‌ ಅಕಾಡೆಮಿ ಕಾಲೇಜುಗಳಲ್ಲಿ 34 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಡಾ. ವಿಜಯಕುಮಾರಿ, ಮಂಗಳೂರು ವಿಶ್ವವಿದ್ಯಾನಿಲಯದ ಬೋರ್ಡ್‌  ಆಫ್‌ ಸ್ಟಡೀಸ್‌ (ಬಿಒಎಸ್‌) ಸದಸ್ಯರಾಗಿ ಹಾಗೂ ಪಾರ್ಮ್ಯಾಟ್‌ ನ ಅಧ್ಯಕ್ಷರಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಗಣಿತ ಪಠ್ಯಕ್ರಮದಲ್ಲಿ ಪ್ರಾಯೋಗಿಕ ತರಗತಿಗಳನ್ನು ಪ್ರಾರಂಭಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

 

ಫಾರ್ಮಾಟ್‌ ಅಧ್ಯಕ್ಷ ಪ್ರೊ. ಉದಯ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಕೆನರಾ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ಹಾಗೂ ವಿವಿ ಕಾಲೇಜಿನ ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಸುಬ್ರಹ್ಮಣ್ಯ ಭಟ್‌ ಎಸ್‌ ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2