ಮಹಿಳೆಯ ಜೊತೆ ಅನೈತಿಕ ಸಂಬಂಧ..ಸಿಕ್ಕಿಬಿದ್ದ ಕಾನ್ಸ್ಟೇಬಲ್ ಗೆ ಹಿಗ್ಗಾಮುಗ್ಗ ಥಳಿತ...
Friday, September 3, 2021
ಯಾದಗಿರಿ: ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಪೊಲೀಸ್ ಕಾನ್ಸ್ಟೇಬಲ್ ಗೆ ಜನರು ಹಿಗ್ಗಾಮುಗ್ಗ ಥಳಿಸಿದ್ದಾರೆ..
ಗುರಪ್ಪ ಎಂಬಾ ಪೊಲೀಸ್ ಕಾನ್ಸ್ಟೇಬಲ್ ಕಳೆದ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹಿಳೆ ಮನೆಗೆ ಬಂದು
ರೆಡ್ ಹ್ಯಾಂಡ್ ಆಗಿ ಕುಟುಂಬಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾನೆ.ಇದರಿಂದ ರೊಚ್ಚಿಗೆದ್ದ ಮಹಿಳೆಯ ಕುಟುಂಬಸ್ಥರು ಆತನ ಕೈಕಾಲು ಕಟ್ಟಿ, ಹಿಗ್ಗಾಮುಗ್ಗಾ ಏಟು ನೀಡಿದ್ದಾರೆ. ತನ್ನನ್ನು ಕಾಪಾಡಿ.. ಬಿಟ್ಟು ಬಿಡಿ ಅಂತ ಅಂಗಲಾಚಿದರೂ ಬಿಡದ ಜನ, ಮನಬಂದಂತೆ ಥಳಿಸಿದ್ದಾರೆ.
ಗಾಯಗೊಂಡ ಕಾನ್ಸ್ಟೇಬಲ್ ಗುರಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುರಪ್ಪ ವಿರುದ್ಧ ಮಹಿಳೆಯು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.