ಪಾರ್ಟಿಯಲ್ಲಿ ಇದ್ದಾಗ ಏನು ಕೆಳಗೆ ಬಿದ್ದಗಾಯ್ತು.. ನೋಡಿದ್ರೆ ನನಗೆ ಡೆಲಿವರಿ ಆಗಿತ್ತು..ಗರ್ಭಿಣಿಯಾಗಿದ್ದೇ ಗೊತ್ತಿರ್ಲಿಲ್ಲ.!!
Friday, September 3, 2021
ನ್ಯೂಯಾರ್ಕ್: ನ್ಯೂಯಾರ್ಕಿನ ಮಹಿಳೆಯೊಬ್ಬಳಿಗೆ ತಾನು ಗರ್ಭಿಣಿ ಎಂಬುದೇ ತಿಳಿಯದೆ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸುತ್ತಿರುವಾಗ ಮಗು ಕೆಳಗೆ ಬಿದ್ದಿರುವ ವಿಚಿತ್ರ ಘಟನೆಯೊಂದು ನಡೆದಿದೆ...
23 ವರ್ಷದ ಲವೀನಿಯಾ ಎಂಬಾಕೆ ರಾತ್ರಿ ಸುಮಾರು 10 ಗಂಟೆಯ ಹೊತ್ತಿಗೆ ಪಾರ್ಟಿ ಮಾಡುತ್ತಿದ್ದಾಗ ಹೊಟ್ಟೆ ನೋವು ಕಾಣಿಸಿಕೊಂಡಿದೆ. ನಂತರ ಕೆಳಭಾಗದಿಂದ ಏನೋ ಬಂದಂಗಾಗಿದೆಯಂತೆ. ನಂತರ ನೋಡಿದರೆ ಅದು ಮಗು ಎಂದು ಗೊತ್ತಾಗಿದೆ, ಆಗಲೇ ಆಕೆಗೆ ತಿಳಿದಿದ್ದು, ತನಗೆ ಡೆಲಿವರಿ ಆಗಿದೆ, ಇಷ್ಟು ತಿಂಗಳು ತಾನು ಗರ್ಭ ಧರಿಸಿದ್ದೆ ಎಂದು.ನನಗೆ ಹೊಟ್ಟೆ ಮುಂದೆ ಬಂದಿದ್ದರೂ ಅದು ಬೊಜ್ಜು ಇರಬೇಕು ಎಂದುಕೊಂಡಿದ್ದರಂತೆ. ಮಾಸಿಕ ಋತುಸ್ರಾವದಲ್ಲಿ ಆಗಾಗ ಏರುಪೇರು ಆಗುತ್ತಿದ್ದುದರಿಂದ ಗರ್ಭವತಿಯಾದ ಸಮಯದಲ್ಲಿ ಮಾಸಿಕ ಋತುಸ್ರಾವ ಆಗಿರದಿದ್ದರೂ ಅವರು ತಲೆ ಕೆಡಿಸಿಕೊಂಡಿರಲಿಲ್ಲ.ಮಗು ಮತ್ತು ಅಮ್ಮ ಇಬ್ಬರೂ ಆರೋಗ್ಯದಿಂದ ಇದ್ದಾರೆ. ಆದರೆ ಖುದ್ದು ಈ ತಾಯಿಗೇ ಆಘಾತವಾಗಿದೆ. ನಾನಿನ್ನೂ ಆಘಾತದಲ್ಲಿಯೇ ಇದ್ದೇನೆ ಎಂದಿದ್ದಾರೆ ಲವೀನಿಯಾ.