ಬಹಿರ್ದೆಸೆಗೆ ತೆರಳಿದ್ದ ಮಹಿಳೆಯ ನಿಗೂಢ ಸಾವು: ಮಗಳ ಪ್ರಿಯಕರ ಪೊಲೀಸ್ ವಶ..
Friday, September 3, 2021
ಮೈಸೂರು: ಬಹಿರ್ದೆಸೆಗೆ ತೆರಳಿದ್ದ ಮಹಿಳೆಯೊಬ್ಬಳು ನಿಗೂಢವಾಗಿ ಮೃತಪಟ್ಟಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ತನಿಖೆಯಲ್ಲಿ ಆಕೆಯ ಮಗಳನ್ನು ಪ್ರೀತಿಸುತ್ತಿದ್ದವನೆ ಆಕೆಯನ್ನು ಕೊಂದಿರುವುದು ಎಂದು ಬಯಲಾಗಿದೆ.
ಮಹೇಶ್ ಕುಮಾರ್ (23) ಈ ಪ್ರಕರಣದ ಆರೋಪಿ.ತಾನು ಕೊಲೆಯಾದ ಭಾಗ್ಯಲಕ್ಷ್ಮಿಯ ಮಗಳನ್ನು ಪ್ರೀತಿಸುತ್ತಿದ್ದು, ಪ್ರೀತಿಗೆ ಆಕೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ತಲೆಗೆ ಗುದ್ದಲಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಕಳೆದ ಆಗಸ್ಟ್ 24ರಂದು ಬಹಿರ್ದೆಸೆಗೆ ಹೋಗಿದ್ದ ಮೂಗೂರು ಗ್ರಾಮದ ಭಾಗ್ಯಲಕ್ಷ್ಮಿ ಎಂಬವರ ಮೃತದೇಹ ಟಿ.ನರಸೀಪುರ ತಾಲೂಕಿನ ಹೊಸಹಳ್ಳಿ ಸೇತುವೆ ಬಳಿ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದು, ಈ ಸಂಬಂಧ ಆರೋಪಿ ಮಹೇಶ್ ಕುಮಾರ್ನನ್ನು ಬಂಧಿಸಿದ್ದಾರೆ.