ಸಮವಸ್ತ್ರ ಹಾಕದೆ ಬಂದ ವಿದ್ಯಾರ್ಥಿನಿಯರಿಗೆ ಬಟ್ಟೆ ಬಿಚ್ಚುವಂತೆ ಹೇಳಿದ ಪ್ರಾಂಶುಪಾಲ...!!
Tuesday, September 7, 2021
ಪ್ರಾಂಶುಪಾಲರು ವಿದ್ಯಾರ್ಥಿನಿಯರಿಗೆ ಸಮವಸ್ತ್ರದ ವಿಚಾರವಾಗಿ ಪ್ರಶ್ನೆ ಮಾಡಿದ್ದಾರೆ. ವಿದ್ಯಾರ್ಥಿನಿಯರು ಮುಂದಿನ ಸೋಮವಾರದವರೆಗೆ ತಮಗೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಪ್ರಾಂಶುಪಾಲ ರಾಧೆಶ್ಯಾಮ್ ಮಾಳ್ವಿಯಾ(50), ವಿದ್ಯಾರ್ಥಿನಿಯರು ಹಾಕಿಕೊಂಡಿರುವ ಬಟ್ಟೆ ಬಿಚ್ಚುವಂತೆ ತಿಳಿಸಿದ್ದಾನೆ. ಜೊತೆಗೆ ನಾಳೆಯಿಂದ ಸಮವಸ್ತ್ರ ಹಾಕಿಕೊಂಡು ಶಾಲೆಗೆ ಬರುವಂತೆ ಸೂಚನೆ ನೀಡಿದ್ದಾನೆ.ಇದರಿಂದ ಮನನೊಂದಿರುವ ವಿದ್ಯಾರ್ಥಿನಿಯರು, ಪೋಷಕರ ಸಹಾಯದಿಂದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ ಎಂದು ವರದಿಯಾಗಿದೆ.
ಪ್ರಾಂಶುಪಾಲನ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಈ ಘಟನೆ ಬೆನ್ನಲ್ಲೇ ಪ್ರಾಂಶುಪಾಲ ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ.