-->
ಜೋಕಾಲಿ ಆಡುತ್ತಿದ್ದ ಬಾಲಕನ ಕತ್ತಿಗೆ ಹಗ್ಗ ಬಿಗಿದು ಸ್ಥಳದಲ್ಲಿಯೇ ಮೃತ್ಯು

ಜೋಕಾಲಿ ಆಡುತ್ತಿದ್ದ ಬಾಲಕನ ಕತ್ತಿಗೆ ಹಗ್ಗ ಬಿಗಿದು ಸ್ಥಳದಲ್ಲಿಯೇ ಮೃತ್ಯು

ಹಾಸನ: ಜೋಕಾಲಿ ಆಡುತ್ತಿರುವಾಗ ಕತ್ತಿಗೆ ಹಗ್ಗ ಬಿಗಿದು ಬಾಲಕ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬೆಂಡೆಕೆರೆ ಗ್ರಾಮದಲ್ಲಿ ನಡೆದಿದೆ.

ಅರಸೀಕೆರೆ ತಾಲ್ಲೂಕಿನ ಬೆಂಡೆಕೆರೆ ಗ್ರಾಮದ ಮನೋಜ್(8) ಮೃತ ಬಾಲಕ.

ಮನೋಜ್ ಹೆತ್ತವರು ಕೃಷಿ ಕೆಲಸಕ್ಕಾಗಿ ಹೊಲಕ್ಕೆ ತೆರಳಿದ್ದರು. ಈ ಸಂದರ್ಭ ಬಾಲಕ‌ ಮನೆಯಲ್ಲಿದ್ದ ಜೋಕಾಲಿಯಲ್ಲಿ ಆಡುತ್ತಿದ್ದನು. ಆಗ ಜೋಕಾಲಿಯ ಹಗ್ಗವು ಬಾಲಕನ ಕತ್ತಿಗೆ ಬಿಗಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಹೆತ್ತ ಕುಡಿಯನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಬಗ್ಗೆ ಬಾಣಾವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99