ರಂಗಸ್ಥಳಂ ಚಿತ್ರದ ಲಿಪ್ಲಾಕ್ ಸೀನ್ ಹಿಂದಿನ ರಹಸ್ಯ ಬಿಚ್ಚಿಟ್ಟ ನಿರ್ದೇಶಕ...
Tuesday, September 7, 2021
ಹೈದರಾಬಾದ್: ರಂಗಸ್ಥಳಂ ಚಿತ್ರದಲ್ಲಿ ಸಮಂತಾ ಮತ್ತು ರಾಮ್ ಚರಣ್ ಲಿಪ್ಲಾಕ್ ಸೀನ್ ಬಗ್ಗೆ ಭಾರಿ ಚರ್ಚೆ ಶುರುವಾಗಿತ್ತು. ಆದರೆ, ಈ ದೃಶ್ಯದ ಹಿಂದೆ ಕುತೂಹಲಕಾರಿ ಸ್ಟೋರಿಯೊಂದು ಇರುವುದು ಇದೀಗ ಹೊರಬಿದ್ದಿದೆ.
ನಿರ್ದೇಶಕ ಸುಕುಮಾರ್ ಚಿತ್ರದ ಸ್ಕ್ರಿಪ್ಟ್ ಅನ್ನು ರಾಮ್ ಚರಣ್ಗೆ ವಿವರಿಸುವಾಗ ಚಿತ್ರದಲ್ಲಿ ಲಿಪ್ಲಾಕ್ ದೃಶ್ಯವಿದೆ ಎಂದು ಹೇಳಿದ್ದರು. ಆದರೆ, ತನ್ನ ಪತ್ನಿ ಉಪಾಸನಾ ಕಮಿನೇನಿಯ ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ಉದ್ದೇಶದಿಂದ ರಾಮ್ ಚರಣ್ ಸೀನ್ ಅನ್ನು ತೆಗೆದುಹಾಕುವಂತೆ ಹೇಳಿದ್ದರು. ಅದಕ್ಕೆ ಒಪ್ಪಿದ ನಿರ್ದೇಶಕರು ಶೂಟಿಂಗ್ ಶುರು ಮಾಡಿದರು.
ಒಮ್ಮೆ ಚಿತ್ರದ ಚಿತ್ರೀಕರಣ ಪೂರ್ಣಗೊಂಡ ಬಳಿಕ ಹೊಸ ಐಡಿಯಾದೊಂದಿಗೆ ನಿರ್ದೇಶಕ ಸುಕುಮಾರ್ ಮತ್ತೊಮ್ಮೆ ರಾಮ್ ಚರಣ್ ಮನವೊಲಿಸಲು ಮುಂದಾದರು. ನೀವೇನು ಕಿಸ್ ಮಾಡ್ಬೇಡಿ ಸರ್, ನಟಿಯೊಂದಿಗೆ ಮಾಡಿದಂತೆ ನಟಿಸಿ ನಾವು ಪೋಸ್ಟ್ ಪ್ರೊಡಕ್ಷನ್ನಲ್ಲಿ ಗ್ರಾಫಿಕ್ಸ್ನಲ್ಲಿ ಮಾಡಿಕೊಳ್ಳುತ್ತೇವೆ ಅಂದಿದ್ದರು. ಅದಕ್ಕೂ ಯೋಚನೆ ಮಾಡಿ ಕೊನೆಗೆ ರಾಮ್ಚರಣ್ ಓಕೆ ಅಂದಿದ್ದರು. ಯಾವಾಗ ಆ ದೃಶ್ಯ ಚಿತ್ರೀಕರಿಸಲು ಮುಂದಾದರೋ ನಟಿ ಸಮಂತಾರೇ ರಾಮ್ ಚರಣ್ ಜತೆ ಲಿಪ್ಲಾಕ್ ಮಾಡಿದರಂತೆ. ಇಷ್ಟೆಲ್ಲ ಪ್ರಯತ್ನದ ಬಳಿಕ ಈ ದೃಶ್ಯ ಬೆಳಕಿಗೆ ಬಂದಿತು ಎಂದು ನಿರ್ದೇಶಕರು ಹೇಳಿದ್ದಾರೆ. ಈ ದೃಶ್ಯವಿಲ್ಲದೇ ಅವರು ಚಲನಚಿತ್ರದಲ್ಲಿ ಅವರ ಕೆಮಿಸ್ಟ್ರಿಗೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.