ಸಂಗೀತಾ (35 ) ಹಾಗೂ ಮಧುಶ್ರೀ (11 ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಸಂಗೀತಾ ಪತಿ ಧನಶೇಖರ್ ಅವರು ಹೋಲ್ ಸೇಲ್ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಕೋವಿಡ್ ಬಂದ ಬಳಿಕ ಧನಶೇಖರ್ ವ್ಯವಹಾರದಲ್ಲಿ ಭಾರಿ ಪ್ರಮಾಣದ ನಷ್ಟ ಅನುಭವಿಸಿದ್ದರು. ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ ಸಾಕಷ್ಟು ಸಾಲವನ್ನೂ ಮಾಡಿದ್ದರು. ಪತಿ ಸಾಲ ಮಾಡಿದ ವಿಷಯ ತಿಳಿದಿದ್ದ ಪತ್ನಿ ಸಂಗೀತಾ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎನ್ನಲಾಗಿದೆ. ಸಾಲಕ್ಕೆ ಹೆದರಿದ ಸಂಗಿತಾ ತನ್ನ ಮಗಳು ಮಧುಶ್ರೀಗೆ ಸೀರೆಯ ಒಂದು ಬದಿಯಿಂದ ನೇಣುಹಾಕಿ ಬಳಿಕ ಸೀರೆಯ ಇನ್ನೊಂದು ಬದಿಯಿಂದ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಂಡ ಮಾಡಿದ ಸಾಲಕ್ಕೆ ಭಯಪಟ್ಟು ಆತ್ಮಹತ್ಯೆಗೆ ಶರಣಾದ ಹೆಂಡತಿ,ಮಗಳು...
ಶಿವಮೊಗ್ಗ: ಗಂಡ ಮಾಡಿದ ಸಾಲಕ್ಕೆ ಭಯಪಟ್ಟು ಮಹಿಳೆ ತನ್ನ ಮಗಳೊಂದಿಗೆ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಭದ್ರಾವತಿಯ ಯಾಕ್ಸಿನ್ ನಗರದಲ್ಲಿ ನಡೆದಿದೆ.
ಟ್ಯಾಗ್‌ಗಳು:
STATE