ಈ ಮನೆಯೊಳಗಡೆ ಮೂರು ದಿನದಿಂದ ಅಡಗಿತ್ತು 7 ಅಡಿ ಉದ್ದದ ಕಾಳಿಂಗ ಸರ್ಪ..!
Tuesday, September 7, 2021
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ರಾಜನಗರದ ಮನೆಯೊಂದರಲ್ಲಿ ಕಾಳಿಂಗ ಸರ್ಪ ಕಂಡುಬಂದಿದೆ. ಮೂರು ದಿನಗಳಿಂದ ಈ ಮನೆಯೊಳಗಡೆ 7 ಅಡಿ ಉದ್ದದ ಕಾಳಿಂಗ ಸರ್ಪ ಅಡಗಿಕೊಂಡಿತ್ತು.
ಮನೆಯವರಿಗೆ ಮೊದಲು ಅದು ಕಾಳಿಂಗಸರ್ಪ ಎಂಬ ವಿಚಾರ ತಿಳಿದಿರಲಿಲ್ಲ.ತದನಂತರದ ಕಾಳಿಂಗಸರ್ಪ ಎಂದು ತಿಳಿದ ಬಳಿಕ ಅವರು ಸ್ನೇಕ್ ಅರ್ಜುನ್ ಎಂಬವರಿಗೆ ಈ ಬಗ್ಗೆ ಮಾಹಿತಿ ನೀಡಿದರು.
ಸ್ನೇಕ್ ಅರ್ಜುನ್ ವಿಷಕಾರಿ ಕಾಳಿಂಗ ಸರ್ಪವನ್ನು ಹುಷಾರಾಗಿ ಹಿಡಿದು ಅರಣ್ಯಕ್ಕೆ ಕೊಂಡೊಯ್ದು ಬಿಟ್ಟುಬಂದಿದ್ದಾರೆ. ಹಾವು ಹಿಡಿಯುವುದರಲ್ಲಿ ಪರಿಣತರಾಗಿರುವ ಸ್ನೇಕ್ ಅರ್ಜುನ್ ಇದುವರೆಗೂ ನೂರಾರು ಕಾಳಿಂಗ ಸರ್ಪವನ್ನು ಹಿಡಿದಿದ್ದು, ಬಹಳಷ್ಟು ಮನೆಯವರನ್ನು ಅಪಾಯದಿಂದ ಪಾರು ಮಾಡಿರುತ್ತಾರೆ.