ಭಾರತೀಯ ಅಂಚೆಯಿಂದ ಅಭಿನಯ ಚಕ್ರವರ್ತಿಗೆ ಗೌರವ..ಮೈ ಸ್ಟ್ಯಾಂಪ್ ಮೇಲೆ ಕಿಚ್ಚನ ಭಾವಚಿತ್ರ..
Monday, September 6, 2021
ಬೆಂಗಳೂರು: ಭಾರತೀಯ ಅಂಚೆಯಿಂದಲೂ 50ನೇ ವಸಂತಕ್ಕೆ ಕಾಲಿಟ್ಟ ಕಿಚ್ಚನಿಗೆ ಬಹು ದೊಡ್ಡ ಸನ್ಮಾನ ದೊರೆತಿದೆ.
ಭಾರತೀಯ ಅಂಚೆ ಮೇಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಭಾವಚಿತ್ರ ಮೂಡಿದೆ. ಮೈ ಸ್ಟಾಂಪ್ ಮೇಲೆ ಕಿಚ್ಚನ ಭಾವ ಚಿತ್ರ ಹಾಕುವ ಮೂಲಕ ಸಕಲಕಲಾವಲ್ಲಭನಿಗೆ ಭಾರತೀಯ ಅಂಚೆ ಗೌರವ ಸಲ್ಲಿಸಿದೆ. ಕನ್ನಡ ಚಿತ್ರರಂಗದ ಅಂಚೆ ಸ್ಟಾಂಪ್ ಮೇಲೆ ಸುದೀಪ್ ಫೋಟೋ ಹಾಕಲಾಗಿದೆ.
ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿಯ ಸಮಾಜಮುಖಿ ಕೆಲಸ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಸುದೀಪ್ ಅವರಿಗೆ ಸಿಕ್ಕ ಗೌರವ ಇದಾಗಿದೆ.