-->
ads hereindex.jpg
ಅಕ್ರಮವಾಗಿ ಹಾವಿನ ವಿಷ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ... ಅದರ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ...

ಅಕ್ರಮವಾಗಿ ಹಾವಿನ ವಿಷ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ... ಅದರ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ...

 ಜಲ್ಪಾಯ್​​ಗುರಿ: ಅಕ್ರಮವಾಗಿ ಹಾವಿನ ವಿಷ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಈತ 13 ಕೋಟಿ ರೂಪಾಯಿ ಮೌಲ್ಯದ ಹಾವಿನ ವಿಷಯಗಳನ್ನು ಸಂಗ್ರಹಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ.

ಈ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ್ ದಿನಜ್​​ಪುರ್​​ನಲ್ಲಿ ನಡೆದಿದೆ. ಗೊರುಮರ ರಾಷ್ಟ್ರೀಯ ಪಾರ್ಕ್​ನಲ್ಲಿ ಆರೋಪಿ ಮೂರು ಜಾಡಿಯಲ್ಲಿ ಹಾವಿನ ವಿಷ ಶೇಖರಿಸಿಕೊಂಡಿದ್ದು, ಕಳ್ಳ ಮಾರ್ಗದಲ್ಲಿ ಚೀನಾ ದೇಶಕ್ಕೆ ಮಾರಾಟ ಮಾಡುವ ಯೋಜನೆ ರೂಪಿಸಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.  ಆರೋಪಿಯನ್ನು ಆರು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

Ads on article

Advertise in articles 1

advertising articles 2