
4 ನೇ ತರಗತಿಯ ಬಾಲಕಿಗೆ ಅಶ್ಲೀಲ ವೀಡಿಯೋ ತೋರಿಸಿ ಅತ್ಯಾಚಾರವೆಸಗಿದ ಮುಖ್ಯೋಪಾಧ್ಯಾಯ...
Sunday, September 12, 2021
ಲಕ್ನೋ : 4 ನೇ ತರಗತಿಯ ವಿದ್ಯಾರ್ಥಿನಿಯೋರ್ವಳಿಗೆ ಅಶ್ಲೀಲ ವಿಡಿಯೋ ತೋರಿಸಿ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ಶಾಲೆಯೊಂದರಲ್ಲಿ ನಡೆದಿದೆ.
4 ನೇ ತರಗತಿಯ ವಿದ್ಯಾರ್ಥಿನಿ ಸೀತಾಪುರದ ಗೊಂಡ್ಲಾಮೌ ಬ್ಲಾಕ್‌ನಲ್ಲಿರುವ ತನ್ನ ಶಾಲೆಗೆ ತರಳಿದ್ದ ವೇಳಿಯಲ್ಲಿ ಈ ಘಟನೆ ನಡೆದಿದೆ. ಇದೀಗ ಸಂತ್ರಸ್ತ ಬಾಲಕಿಯ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಯನ್ನು ಶಾಲೆಯ ಆವರಣದಲ್ಲಿರುವ ಕೋಣೆಯಲ್ಲಿ ಕರೆಸಿಕೊಂಡು, ಆಕೆಗೆ ಅಸಭ್ಯ ವೀಡಿಯೊವನ್ನು ತೋರಿಸಿದ ದೌರ್ಜನ್ಯವೆಸಗಿದ್ದಾನೆ.ಹುಡುಗಿ ಅಳುತ್ತಾ ಪ್ರತಿರೋಧ ವ್ಯಕ್ತಪಡಿಸಿದಾಗ ಆತ ಕೊಠಡಿಯನ್ನು ಒಳಗಿನಿಂದ ಲಾಕ್ ಮಾಡಿದ್ದಾನೆ. ಅಪ್ರಾಪ್ತ ಬಾಲಕಿ ತನ್ನ ತಂದೆಯ ಮುಂದೆ ಈ ಬಗ್ಗೆ ವಿವರಿಸಿದ್ದಾಳೆ, ನಂತರ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿದೆ.
ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು, ಮುಖ್ಯೋಪಾಧ್ಯಾಯರ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.