-->

 ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲು ಕಾಯುತ್ತಿರುವವರಿಗೆ ಗುಡ್ ನ್ಯೂಸ್...!!

ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲು ಕಾಯುತ್ತಿರುವವರಿಗೆ ಗುಡ್ ನ್ಯೂಸ್...!!

ಭಾರತದಿಂದ ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲು ಕಾಯುತ್ತಿರುವವರಿಗೆ ಇದೀಗ ಒಂದು ಗುಡ್ ನ್ಯೂಸ್.

ಕೊರೋನಾ ಲಸಿಕೆ 2 ಡೋಸ್​ಗಳನ್ನು ಸ್ವೀಕರಿಸಿದವರು ಅರಬ್​ ರಾಷ್ಟ್ರಕ್ಕೆ ಬರಬಹುದು ಎಂಬ ಅನುಮತಿ ಸಿಕ್ಕಿದೆ. ಇದರಲ್ಲಿ ಈ ಹಿಂದೆ ಅಮಾನತು ಮಾಡಿದ್ದ ದೇಶಗಳ ಪೈಕಿ 12 ರಾಷ್ಟ್ರಗಳ ಪ್ರಜೆಗಳಿಗೆ ಅವಕಾಶ ದೊರಕಿದೆ.

ದುಬೈನಲ್ಲಿ ಕೊರೋನಾದಿಂದಾಗಿ ಕಳೆದ 1 ವರ್ಷದಿಂದ ಮುಂದೂಡಲ್ಪಟ್ಟಿದ್ದ ದುಬೈ ವರ್ಲ್ಡ್​ ಎಕ್ಸಪೋ 2020 ಅಕ್ಟೋಬರ್ 1ರಂದು ನಡೆಯಲಿದೆ. ಈ ಕಾರಣಕ್ಕೆ ನಾಳೆಯಿಂದ ಪ್ರಯಾಣ ನಿರ್ಬಂಧಗಳನ್ನು ತೆಗೆದುಹಾಕುವ ನಿರ್ಧಾರಕ್ಕೆ ಅರಬ್​ ರಾಷ್ಟ್ರ ಬಂದಿದೆ.

ಅರಬ್​ ರಾಷ್ಟ್ರಗಳ ಬ್ಯುಸಿನೆಸ್​ ಹಬ್​ಗಳಲ್ಲಿ ಒಂದಾದ ದುಬೈ 1 ವರ್ಷಗಳ ಕಾಯುವಿಕೆಯ ಬಳಿಕ ಇದೀಗ ವರ್ಲ್ಡ್​ ಎಕ್ಸ್​ಪೋಗೆ ಮುಂದಾಗಿದೆ. ಪ್ರಾದೇಶಿಕ ವ್ಯಾಪಾರ ಹಾಗೂ ಪ್ರವಾಸೋದ್ಯಮ ಕೇಂದ್ರವಾದ ದುಬೈ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಈ ಮೇಳವನ್ನು ನಡೆಸುತ್ತದೆ. ಎಕ್ಸ್​ಪೋ ಸಮಯದಲ್ಲಿ ಕೊರೋನಾ ನಿಯಂತ್ರಿಸಲು ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಸಂಘಟಕರು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99