ಆರು ವರ್ಷದ ಬಾಲಕಿ ಮೇಲೆ ಕಾಮುಕರ ಅಟ್ಟಹಾಸ - ಅತ್ಯಾಚಾರ, ಕೊಲೆ
Saturday, September 11, 2021
ಹೈದರಾಬಾದ್: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಿರುವ ಘಟನೆ ಸಯೀದಾಬಾದ್ ಪ್ರದೇಶದ ಸಿಂಗರೇಣಿ ಕಾಲೋನಿಯಲ್ಲಿ ಬೆಳಕಿಗೆ ಬಂದಿದೆ.
ಕಾಣೆಯಾಗಿದ್ದ ಬಾಲಕಿ ಮೃತದೇಹ ಪಕ್ಕದ ಮನೆಯಲ್ಲಿ ಪತ್ತೆಯಾಗಿದ್ದು, ಹತ್ಯೆಗೂ ಮುನ್ನ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ.ಸ್ಥಳಕ್ಕೆ ಧಾವಿಸಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.
ಶವ ಪರೀಕ್ಷೆಗಾಗಿ ಮೃತದೇಹ ನೀಡದಿರಲು ಸ್ಥಳೀಯರು ಮುಂದಾಗಿದ್ದು, ಪೊಲೀಸರು ಅವರ ಮನವೊಲಿಸಿ ಶವವನ್ನು ಪರೀಕ್ಷೆಗೆ ರವಾನಿಸಿದರು. ಬಾಲಕಿ ಮೃತದೇಹ ಪತ್ತೆಯಾಗುತ್ತಿದ್ದಂತೆ, ಆರೋಪಿ ರಾಜು ತಲೆ ಮರೆಸಿಕೊಂಡಿದ್ದು, ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.