
ಸ್ವಿಮ್ಮಿಂಗ್ ಪೂಲ್ ನಲ್ಲಿ ಮಹಿಳಾ ಕಾನ್ಸ್ಟೇಬಲ್ ಜೊತೆ DSP ಸರಸ ಸಲ್ಲಾಪ.... ಆರು ವರ್ಷದ ಮಗನ ಮುಂದೆಯೇ ಅಶ್ಲೀಲ ಕೃತ್ಯ...
ಜೈಪುರ್(ರಾಜಸ್ಥಾನ) : ಮಹಿಳಾ ಕಾನ್ಸ್ಟೇಬಲ್ ಮತ್ತು ರಾಜಸ್ಥಾನ ಪೊಲೀಸ್ ಸೇವಾ (ಆರ್‌ಪಿಎಸ್) ಅಧಿಕಾರಿಯ ಸರಸ ಸಲ್ಲಾಪದ ವಿಡಿಯೋ ಇದೀಗ ವೈರಲ್ ಆಗಿದೆ. ಈ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ತನ್ನ ಆರು ವರ್ಷದ ಮಗನ ಮುಂದೆಯೇ ಮಹಿಳಾ ಕಾನ್ಸ್ಟೇಬಲ್ ಹಾಗೂ ಪೊಲೀಸ್ ಅಧಿಕಾರಿ ಈಜುಕೊಳದಲ್ಲಿ ಅಶ್ಲೀಲ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಪೊಲೀಸ್ ಅಧಿಕಾರಿ ಹೀರಾಲಾಲ್ ಸೈನಿ ಇದರಲ್ಲಿ ಭಾಗಿಯಾಗಿದ್ದಾರೆ.ಇದರ ವಿಡಿಯೋ ಒಂದು ವೈರಲ್ ಆಗುತ್ತಿದ್ದಂತೆ, ರಾಜಸ್ಥಾನ ಪೊಲೀಸ್ ಇಲಾಖೆ ಅಧಿಕಾರಿ ಹಾಗೂ ಮಹಿಳಾ ಕಾನ್ಸ್ಟೇಬಲ್ ಅಮಾನತುಗೊಂಡಿದ್ದಾರೆ. ಹೀರಾಲಾಲ್ ಸೈನಿಯನ್ನ ಬಂಧನಕ್ಕೊಳಪಡಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.ಮಹಿಳಾ ಕಾನ್ಸ್ಟೇಬಲ್ ಇನ್ನು ಕೂಡ ಬಂಧನವಾಗಿಲ್ಲ.
ಈ ಘಟನೆಯ ಬಗ್ಗೆ ಸಂಬಂಧಿಸಿದಂತೆ ಮಹಿಳಾ ಕಾನ್ಸ್ಟೇಬಲ್ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು ಎಂದು ವರದಿಯಾಗಿದೆ.