ಶಿಲ್ಪ ರಾಜ್ ಕುಂದ್ರಾ ಗೆ ಮತ್ತೊಂದು ಸಂಕಷ್ಟ.. ಕೋರ್ಟ್ ನಲ್ಲಿ ಕೇಸ್ ದಾಖಲು...
Friday, September 3, 2021
ನವದೆಹಲಿ: ಬ್ಲೂಫಿಲ್ಮ್‌ಂ ಕೇಸ್‌ನಲ್ಲಿ ಬಂಧಿತರಾಗಿರುವ ಉದ್ಯಮಿ ರಾಜ್‌ಕುಂದ್ರಾ ಹಾಗೂ ಅವರ ಪತ್ನಿ ನಟಿ ಶಿಲ್ಪಾ ಶೆಟ್ಟಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.
ಇವರ ವಿರುದ್ಧ ದೆಹಲಿ ಉದ್ಯಮಿ ವಿಶಾಲ್ ಗೋಯಲ್ ಎನ್ನುವವರು ದೂರು ದಾಖಲು ಮಾಡಿದ್ದಾರೆ. ಸೌಂದರ್ಯ ವರ್ಧಕ, ಆ್ಯನಿಮೇಷನ್ ಹಾಗೂ ಗೇಮಿಂಗ್ ಅಪ್ಲಿಕೇಶನ್ ವ್ಯವಹಾರ ನಡೆಸುವುದಾಗಿ ಹೇಳಿಕೊಂಡು ತಮ್ಮಿಂದ ಲಕ್ಷಗಟ್ಟಲೇ ಹಣ ಹೂಡಿಕೆ ಮಾಡಿಕೊಂಡು ಬ್ಲೂಫಿಲ್ಮ್‌ಂ ತಯಾರಿಸಿರುವ ಉದ್ಯಮಿ ರಾಜ್‌ಕುಂದ್ರಾ ಹಾಗೂ ನಟಿ ಶಿಲ್ಪಾ ಶೆಟ್ಟಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ವಿಶಾಲ್ ಕೋರ್ಟ್ ಮೊರೆ ಹೋಗಿದ್ದಾರೆ.
2018ರಲ್ಲಿ ಮುಂಬೈ ಮೂಲದ ಕಂಪನಿಯೊಂದರಲ್ಲಿ ಲಕ್ಷಗಟ್ಟಲೇ ಹಣ ಹೂಡಿಕೆ ಮಾಡುವಂತೆ ಹೇಳಿ ಪ್ರೇರೆಪಿಸಿ ವಂಚನೆ ಮಾಡಲಾಗಿದೆ ಎನ್ನುವುದು ವಿಶಾಲ್ ಅವರ ಆರೋಪ. ಮಾತ್ರವಲ್ಲದೇ ಅವರು ತಮಗೆ ಹಣವನ್ನೂ ವಾಪಸ್ ಮಾಡಿಲ್ಲ, ಜತೆಗೆ ತಮಗೆ ಯಾವುದೆ ಲಾಭದ ಮೊತ್ತ ನೀಡಿಲ್ಲ, ಇದರಿಂದ ಷೇರು ಮೌಲ್ಯ ಕುಸಿದು ತಾವು ನಷ್ಟ ಅನುಭವಿಸಬೇಕಾಗಿ ಬಂದಿದೆ ಎಂದಿದ್ದಾರೆ. ತಮ್ಮಿಂದ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಇಬ್ಬರ ಉದ್ದೇಶಪೂರ್ವಕವಾಗಿ 41.33 ಲಕ್ಷ ರೂಪಾಯಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ. ಈ ಹಣವನ್ನು ದಂಪತಿ ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿದ್ದಾರೆ, ಪೋರ್ನ್ ವಿಡಿಯೋ ಮಾಡಿ ಸಿಕ್ಕಿಕೊಂಡಿರುವುದು ತಮಗೆ ಈಗ ಗೊತ್ತಾಗಿದೆ. ಇದರಿಂದ ನಾನು ಮೋಸ ಹೋಗಿರುವುದು ತಿಳಿದಿದ್ದು, ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.