ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ... . ನನಗೆ ಪ್ರಜ್ಞೆ ಬಂದಾಗ ಆತ ಬೆತ್ತಲೆಯಾಗಿದ್ದ...
Sunday, September 5, 2021
ಬೆಂಗಳೂರು: ಕಿಡಿಗೇಡಿಗಳು ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಲಬುರ್ಗಿ ಮೂಲದ ಸಂತ್ರಸ್ತ ಯುವತಿ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಾಣಸವಾಡಿ ನಿವಾಸಿ ನೈಜೀರಿಯಾ ಮೂಲದ ಟೋನಿ(35) ಹಾಗೂ ಉಬಾಕಾ (36)ನನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ ಯುವತಿಗೆ ಹಲವು ವರ್ಷಗಳಿಂದ ನೈಜೀರಿಯಾ ಪ್ರಜೆ ಟೋನಿ ಪರಿಚಿತನಾಗಿದ್ದ. ಮತ್ತೋರ್ವ ಆರೋಪಿ ಉಬಾಕಾ ಹಲವು ಬಾರಿ ಯುವತಿಯನ್ನು ಪರಿಚಯ ಮಾಡಿಕೊಳ್ಳಲು ಯತ್ನಿಸಿದ್ದ. ಆದರೆ ಇಬ್ಬರ ನಡುವೆ ವೈಷಮ್ಯ ಉಂಟಾಗಿತ್ತು. ಆ.29ರಂದು ಯುವತಿಯನ್ನು ಸ್ನೇಹಿತರ ಮನೆಗೆ ಹೋಗೋಣ ಎಂದು ಉಬಾಕಾ ಮನೆಗೆ ಟೋನಿ ಕರೆದುಕೊಂಡು ಹೋಗಿದ್ದ. ಅಲ್ಲಿ ಉಬಾಕಾನನ್ನು ನೋಡಿದ ಯುವತಿ, ಟೋನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಳು. ಟೋನಿ ಯುವತಿಯನ್ನು ಸಮಾಧಾನಪಡಿಸಿ ಮೂವರು ಜತೆಗೆ ಕುಳಿತು ಮದ್ಯ ಸೇವಿಸಿದ್ದರು. ಕುಡಿದ ಮತ್ತಿನಲ್ಲಿದ್ದಾಗ ತನ್ನ ಮೇಲೆ ಅತ್ಯಾಚಾರ ನಡೆದಿದೆ. ನನಗೆ ಪ್ರಜ್ಞೆ ಬಂದಾಗ ತನ್ನ ಜತೆ ಉಬಾಕ ಬೆತ್ತಲೆಯಾಗಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ಪ್ರಕರಣ ಆಧರಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.