
ಇನ್ಸ್ಟಾಗ್ರಾಂ ಫ್ರೆಂಡ್ ನಿಂದಲೇ ಯುವತಿಯ ಮೇಲೆ ಅತ್ಯಾಚಾರ...
Sunday, September 5, 2021
ಅಹಮದಾಬಾದ್: ಏರ್ ಹೋಸ್ಟೆಸ್ ತರಬೇತಿ ಪಡೆಯುತ್ತಿರುವ ಯುವತಿಯೊಬ್ಬಳನ್ನು ಅಹಮದಾಬಾದಿನ ವೇಜಲ್ಪುರದ ಇಂಜಿನಿಯರಿಂಗ್ ವಿದ್ಯಾರ್ಥಿ ರೇಪ್ ಮಾಡಿ, ಆ ವಿಡಿಯೋ ಕ್ಲಿಪ್ಪನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿಕೊಂಡು ಬಂದಿರುವ ಘಟನೆ ಗುಜರಾತಿನಿಂದ ವರದಿಯಾಗಿದೆ.
22 ವರ್ಷದ ಸಂತ್ರಸ್ತೆಯು 7 ತಿಂಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಅಜಿತ್ ತ್ರಿವೇದಿ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಭೇಟಿ ಮಾಡಿದಳು. ನಂತರ ಅವರಿಬ್ಬರು ಮುಖತಃ ಭೇಟಿಯಾಗುವ ಯೋಜನೆ ಮಾಡಿದರು. ಕಳೆದ ಏಪ್ರಿಲ್ನಲ್ಲಿ ಆಕೆಯನ್ನು ತನ್ನ ಮನೆಗೆ ಆಹ್ವಾನಿಸಿದ ಅಜಿತ್, ಕೋಲ್ಡ್ ಡ್ರಿಂಕ್ನಲ್ಲಿ ಮತ್ತು ತರಿಸುವ ಔಷಧಿ ಸೇರಿಸಿದ. ಅದನ್ನು ಕುಡಿದು ಆಕೆ ಪ್ರಜ್ಞೆ ತಪ್ಪಿದಾಗ, ಲೈಂಗಿಕ ಅತ್ಯಾಚಾರ ನಡೆಸಿದ ಎನ್ನಲಾಗಿದೆ.
ಪೊಲೀಸರು ಆರೋಪಿ ಅಜಿತ್ ತ್ರಿವೇದಿಯನ್ನು ಆತನ ವೇಜಲ್ಪುರದ ಮನೆಯಿಂದ ಬಂಧಿಸಿದ್ದಾರೆ.