ಅವ್ಯಾಚ ಪದಗಳಿಂದ ಹುಡುಗಿಯರಿಗೆ ನಿಂದನೆ.. ಠಾಣೆಯ ಮುಂದೇನೆ ಯುವಕನ ಮೇಲೆ ಹಲ್ಲೆ...
Sunday, September 5, 2021
ರಾಯಚೂರು: ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ತಾಲೂಕಿನಲ್ಲಿ ಪೊಲೀಸ್ ಠಾಣೆಯ ಮುಂದೆಯೇ ಯುವಕನೊಬ್ಬನ ಮೇಲೆ ಹಲ್ಲೆ ನಡೆದಿರುವ ಘಟನೆ ನಡೆದಿದೆ.
ಚಿಕ್ಕಬೂದೂರು ಗ್ರಾಮದ ಪ್ರಭು ಹಲ್ಲೆಗೊಳಗಾದ ಯುವಕ. ಕುಡಿದ ಅಮಲಿನಲ್ಲಿ ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಅಂತ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ ಆವರಣದಲ್ಲೇ ಚಿಕ್ಕಬೂದೂರು ಗ್ರಾಮದ 6 ಜನರು ಹಲ್ಲೆ ಮಾಡಿದ್ದಾರೆ.
ಠಾಣೆಯ ಮುಂದೆಯೇ ಗಲಾಟೆ ನಡೆದಿದ್ದರೂ ಯುವಕನನ್ನು ರಕ್ಷಣೆ ಮಾಡಲು ಪೊಲೀಸರು ಮುಂದಾಗಿಲ್ಲ. ನಂತರ ಜನ ಜಮಾಯಿಸುತ್ತಿದ್ದಂತೆ ಎಚ್ಚೆತ್ತು ಹಲ್ಲೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಈ ಘಟನೆಯ ಹಿನ್ನೆಲೆಯಲ್ಲಿ 6 ಜನರ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,