ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಕೇಸ್ ಗೆ ಟ್ವಿಸ್ಟ್.. ಹಾಸ್ಟೆಲ್ ರಹಸ್ಯ ಮುಚ್ಚಿಟ್ಟುಕೊಳ್ಳಲು ನಡೆಯಿತಾ ಈ ಪ್ಲಾನ್...
Sunday, September 5, 2021
ಮೈಸೂರು: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ, ಹಲ್ಲೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ.
28 ವರ್ಷದ ಸಂತ್ರಸ್ತೆಗೂ ಮತ್ತು 21 ವರ್ಷದ ಆರೋಪಿಗೂ ಮೊದಲೇ ಪರಿಚಯವಾಗಿತ್ತು. ಯುವಕ ಮತ್ತು ಯುವತಿ ನಡುವೆ ತುಂಬಾ ಸಲುಗೆ ಇದ್ದ ಕಾರಣ ಆರೋಪಿಯನ್ನು ಯುವತಿಯೇ ಹಾಸ್ಟೆಲ್ಗೆ ಬರಲು ಹೇಳಿದ್ದಳು. ಯಾರೂ ಇಲ್ಲದ ವೇಳೆ ಪ್ರೇಮಿಗಳು ಹಾಸ್ಟೆಲ್ನಲ್ಲಿ ಒಟ್ಟಿಗಿದ್ದರು. ಆದರೆ, ಸಹಪಾಠಿಗಳು ಬಂದ ಕೂಡಲೇ ಯುವಕ ಎಸ್ಕೇಪ್ ಆಗಿದ್ದ.
ನಾನು ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ, ನೀನು ತಪ್ಪಿಸಿಕೋ ಅಂತಾ ಮೊದಲೇ ಆರೋಪಿಗೆ ಯುವತಿ ಸುಳಿವು ಕೊಟ್ಟಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಇಬ್ಬರ ಕಾಲ್ ಲೀಸ್ಟ್ ಮತ್ತು ಮೆಸೇಜ್ ಲೀಸ್ಟ್ ನೋಡಿದಾಗ ಇಬ್ಬರ ನಾಟಕ ಬಯಲಾಗಿದೆ.