
ಮಂಡ್ಯ ನಗರಸಭೆ ಮಾಜಿ ಸದಸ್ಯನ ಮಗಳ ಆತ್ಮಹತ್ಯೆ ಕೇಸ್ಗೆ ಬಿಗ್ ಟ್ವಿಸ್ಟ್....ಡೆತ್ ನೋಟ್ ನಲ್ಲಿ ಹೆಸರುಗಳು...!
Saturday, September 4, 2021
ಮಂಡ್ಯ: ಮಂಡ್ಯ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಲಿಂಗು ಅವರ ಮಗಳು ಮಾನ್ವಿತಾ(17) ಆ.31ರಂದು ಬಾಲ ಮಂದಿರದಲ್ಲಿ ನೇಣಿಗೆ ಶರಣಾಗಿದ್ದಳು. ಈ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಆಕೆ ಸಾವಿಗೂ ಮುನ್ನ ಬರೆದಿಟ್ಟಿದ್ದು ಕುಖ್ಯಾತ ರೌಡಿ ಅಶೋಕ್ ಪೈ ಹೆಸರನ್ನ ಬಾಲಕಿ ಅದರಲ್ಲಿ ನಮೂದಿಸಿದ್ದಾಳೆ.
ಮಾನ್ವಿತಾ ಮತ್ತು ಕಲ್ಲಹಳ್ಳಿಯ 17 ವರ್ಷದ ಬಾಲಕ ದರ್ಶನ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದ ಶಿವಲಿಂಗು, ಏ.24ರ ರಾತ್ರಿ ಮಗಳ ಪ್ರಿಯಕರನನ್ನು ತನ್ನ ಮನೆಗೆ ಕರೆಸಿಕೊಂಡು ತನ್ನ ಕುಟುಂಬಸ್ಥರೊಂದಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಗಂಭೀರ ಗಾಯಗೊಂಡಿದ್ದ ದರ್ಶನ್, ಏ.25ರಂದು ಮೃತಪಟ್ಟಿದ್ದ. ನಂತರ ಮಾನ್ವಿತಾಳ ತಂದೆ-ತಾಯಿ ಬಳಿಕ ಮಾನ್ವಿತಾಳನ್ನು ಮಂಡ್ಯದ ಬಾಲಕಿಯರ ಬಾಲ ಮಂದಿರದಲ್ಲಿ ಇರಿಸಿದ್ದಾರು. ಈ ನಡುವೆ ಅಪ್ಪ-ಅಮ್ಮನ ವಿರುದ್ಧ ಸಾಕ್ಷಿ ಹೇಳುವಂತೆ ರೌಡಿ ಶೀಟರ್ ಅಶೋಕ್ ಪೈ ಬಾಲಕಿ ಮೇಲೆ ಒತ್ತಡ ಹಾಕುತ್ತಿದ್ದ ಎನ್ನಲಾಗಿದೆ. ಪ್ರಿಯಕರನ ಸಾವು, ಹೆತ್ತವರು ಜೈಲು ಸೇರಿದ್ದ ವಿಚಾರದಿಂದ ಮನನೊಂದಿದ್ದ ಬಾಲಕಿ ಖಿನ್ನತೆಗೆ ಒಳಗಾಗಿದ್ದು ಆ.31ರಂದು ಆತ್ಮಹತ್ಯೆ ಮಾಡಿಕೊಂಡು ಸತ್ತಿದ್ದಾಳೆ. ಇದಕ್ಕೂ ಮುನ್ನ ಬರೆದಿಟ್ಟಿದ್ದು ಅಪ್ಪ-ಅಮ್ಮ ಹಾಗೂ ಪ್ರಿಯಕರನನ್ನು ಮಿಸ್ ಮಾಡಿಕೊಳ್ಳುತ್ತಿರುವೆ ಎಂದಿದ್ದಾಳೆ. ಅದರಲ್ಲಿ ರೌಡಿ ಅಶೋಕ್ ಪೈ ಹೆಸರು ಕೂಡ ಇದೆ. ಈ ಹಿನ್ನೆಲೆಯಲ್ಲಿ ಅಶೋಕ್ ಪೈನನ್ನು ಪೊಲೀಸರು ಬಂಧಿಸಿದ್ದಾರೆ.