ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭೆಯಲ್ಲಿ ರಹಸ್ಯ ಸುರಂಗ ಮಾರ್ಗ ಪತ್ತೆ...
Saturday, September 4, 2021
ಈ ಬಗ್ಗೆ ಮಾತನಾಡಿರುವ ದೆಹಲಿ ವಿಧಾನಸಭೆಯ ಸ್ಪೀಕರ್ ರಾಮ್ ನಿವಾಸ್ ಗೋಯೆಲ್, ನಾನು 1993ರಲ್ಲಿ ಶಾಸಕನಾದಾಗ ಕೆಂಪುಕೋಟೆಯವರೆಗೆ ಹೋಗುವ ಸುರಂಗದ ಬಗ್ಗೆ ಸುದ್ದಿಯಿತ್ತು ಮತ್ತು ನಾನು ಅದರ ಇತಿಹಾಸವನ್ನು ಹುಡುಕಲು ಪ್ರಯತ್ನಿಸಿದೆ. ಆದರೆ ಅದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇದೀಗ ಸುರಂಗದ ಬಾಗಿಲು ಪತ್ತೆಯಾಗಿದೆ. ಆದರೆ, ನಾವದನ್ನು ಅಗೆಯುವುದಿಲ್ಲ. ಏಕೆಂದರೆ ಸುರಂಗದ ಎಲ್ಲ ಮಾರ್ಗಗಳು ಮೆಟ್ರೋ ಯೋಜನೆ ಪೈಪ್ ಅಳವಡಿಯಿಂದ ನಾಶವಾಗಿದೆ ಎಂದು ಹೇಳಿದರು. ಆದರೆ, ನಾವದನ್ನು ಶೀಘ್ರವೇ ನವೀಕರಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುತ್ತೇವೆ. ಮುಂದಿನ ವರ್ಷ ಆಗಸ್ಟ್ 15ರೊಳಗೆ ನವೀಕರಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಭಾವಿಸುತ್ತೇನೆಂದು ರಾಮ್ ನಿವಾಸ್ ಗೋಯೆಲ್ ಹೇಳಿದರು. ಪ್ರವಾಸಿಗರು ನಮ್ಮ ಇತಿಹಾಸದ ಪ್ರತಿಬಿಂಬವನ್ನು ಪಡೆಯುವ ರೀತಿಯಲ್ಲಿ ನಾವು ಅದನ್ನು ನವೀಕರಿಸಲು ಉದ್ದೇಶಿಸಿದ್ದೇವೆ ಎಂದು ರಾಮ್ ನಿವಾಸ್ ಗೋಯೆಲ್ ಹೇಳಿದರು.