Header Ad

ಮಾಲ್ಡೀವ್ಸ್ ನಲ್ಲಿ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿರುವ 'ಸನ್ನಿ ಲಿಯೋನ್'


ಮಾಲ್ಡೀವ್ಸ್: 'ನೀಲಿ ಚಿತ್ರ'ಗಳ ಸರಧಾರಿಣಿ ಸನ್ನಿ ಲಿಯೋನ್ ತಮ್ಮ ನೋಟದಲ್ಲೇ ಮನ ಸೂರೆ ಮಾಡುವ ಚೆಲುವೆ. ತಮ್ಮ ಸ್ಟೈಲಿಶ್, ಮಾದಕ ಲುಕ್ ನಿಂದಲೇ ಸೊಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿ ಮಾಡ್ತಿರ್ತಾರೆ. 

ಇದೀಗ ಅವರು ಸಿನಿಮಾ ನಟ-ನಟಿಯರ ಇಷ್ಟದ ಪ್ರವಾಸೀ ತಾಣ ಮಾಲ್ಡೀವ್ಸ್ ನಲ್ಲಿ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಪತಿ ಡೇನಿಯಲ್ ವೆಬರ್ ಮತ್ತು ಇಬ್ಬರು ಮಕ್ಕಳ ಜೊತೆ ಮಾಲ್ಡೀವ್ಸ್ ನಲ್ಲಿ ಕಾಲ ಕಳೆಯುತ್ತಿರುವ ನಟಿ ಬ್ಲೂ ಬಣ್ಣದ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಕೈಯಲ್ಲಿ ಶಾಂಪೆನ್ ಬಾಟೆಲ್ ಹಿಡಿದು ನೋಡುಗ ಮಹಾಶಯನಿಗೆ ಕಿಸ್ ಕೊಟ್ಟಿದ್ದಾರೆ. ಇವರ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.     


ಇನ್ನು ಸನ್ನಿ ಲಿಯೋನ್ ಸಿನಿಮಾ ವಿಚಾರಕ್ಕೆ ಬಂದ್ರೆ ಸದ್ಯ ಶೆರೋ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವು ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿದೆ.
ಇತ್ತೀಚಿನ ಸುದ್ದಿಗಳು